ಕಥಕ್ಕಳಿ ನೃತ್ಯಕ್ಕೆ 300 ವರ್ಷಗಳ ಇತಿಹಾಸ

ಕಥಕ್ಕಳಿ ನೃತ್ಯಕ್ಕೆ 300 ವರ್ಷಗಳ ಇತಿಹಾಸ

ದಾವಣಗೆರೆ, ಫೆ. 23- ಅನೇಕ ನೃತ್ಯ ಪ್ರಕಾರಗಳಲ್ಲಿ ಒಂದಾದ ಕಥಕ್ಕಳಿ ನೃತ್ಯವು 300 ವರ್ಷಗಳ ಇತಿಹಾಸ ಹೊಂದಿದೆ ಎಂದು ಸುಮಾ ಬಾಲಸುಬ್ರಮಣ್ಯಮ್‌ ಹೇಳಿದರು.

ನಗರದ ಬಾಪೂಜಿ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಪಿಕ್ ಮ್ಯಾಕೆಯ ಮುಖ್ಯಸ್ಥ ಮಂಜುನಾಥ ರಂಗರಾಜು ಅವರ ನೇತೃತ್ವದಲ್ಲಿ ಶುಕ್ರವಾರ ನಡೆದ `ಕಥಕ್ಕಳಿ ನೃತ್ಯ ವೈಭವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಪಂಚದಲ್ಲೇ ಈ ನೃತ್ಯ ವಿಶೇಷತೆಯನ್ನು ಪಡೆದಿದೆ. ಮಕ್ಕಳು ನೃತ್ಯ ಕಲೆಯನ್ನು ಕಲಿತು ಮುಂದಿನ ಪೀಳಿಗೆಗೂ ನೃತ್ಯ ಮತ್ತು ಸಂಗೀತ ಕಲೆಯನ್ನು ಪರಿಚಯಿಸಬೇಕು ಎಂದು ಹೇಳಿದರು.

ಶಾಲೆಯ ಮುಖ್ಯಸ್ಥ ಮಂಜುನಾಥ ರಂಗರಾಜು ಮಾತನಾಡಿ, ದೇಶದಲ್ಲಿ ಪ್ರತಿ ರಾಜ್ಯ ತನ್ನದೆ ಆದ ಕಲಾ ಪರಪಂಪರೆಯನ್ನು ಹೊಂದಿದ್ದು, ಅಂತಹ ಪರಂಪರೆಯಲ್ಲಿ ಕೇರಳದ `ಕಥಕ್ಕಳಿ’ ನೃತ್ಯವು ಪ್ರಸಿದ್ಧಿಯಾಗಿದೆ ಎಂದರು.

ದಕ್ಷಿಣ ಭಾರತದ ಅನೇಕ ನೃತ್ಯ ಪ್ರಕಾರಗಳು ಸುಂದರವಾಗಿದ್ದು, ಅವುಗಳನ್ನು ಶಿಕ್ಷಣದ ಜತೆಗೆ ಕಲಿತು, ಉಳಿಸಿಬೇಕಿದೆ. ಮತ್ತು ಜಗತ್ತಿಗೆ ನಮ್ಮ ಕಲಾ ಪರಂಪರೆಯನ್ನು ಸಾರುವ ಕಾರ್ಯ ಮಾಡಬೇಕೆಂದು ಕರೆ ನೀಡಿದರು.

ಈ ವೇಳೆ ಕೇರಳದ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ  ಕಲಾಮಂಡಲಮ್ ಬಾಲಸುಬ್ರಮಣ್ಯಮ್‌ ಕಥಕ್ಕಳಿ ನೃತ್ಯ ರೂಪಕ ಪ್ರದರ್ಶಿಸಿದರು. `ಸೀತಾ ಸ್ವಯಂವರ’ ಅಣಕು ಪ್ರದರ್ಶನವು ಎಲ್ಲರ ಗಮನ ಸೆಳೆಯಿತು.

ಶಾಲೆಯ ಪ್ರಾಚಾರ್ಯೆ ಜೆ.ಎಸ್‌. ವನಿತಾ,  ಶೈಕ್ಷಣಿಕ ಮುಖ್ಯಸ್ಥ ಎಂ. ವಾಸಿಮ್ ಪಾಷಾ, ಪ್ರೌಢಶಾಲಾ ವಿಭಾಗದ ಪ್ರಭಾರಿ ಪಿ.ವಿ. ಪ್ರಭು, ಪ್ರಾಥಮಿಕ ವಿಭಾಗದ ಪ್ರಭಾರಿ ಶೀಬಾರಾಣಿ ಮತ್ತು ಶಾಲೆಯ ಸಿಬ್ಬಂದಿ ಇದ್ದರು.

error: Content is protected !!