ಹರಿಹರ, ಫೆ. 24- ನಗರದ ಹಳೇ ಪಿ.ಬಿ. ರಸ್ತೆಯಲ್ಲಿರುವ ಐಡಿಎಸ್ಎಂಟಿ ವಾಣಿಜ್ಯ ಸಂಕೀರ್ಣದ ಮುಂಭಾಗದಲ್ಲಿರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅನ್ನು ಸ್ಥಳಾಂತರಿಸುವಂತೆ ಆಗ್ರಹಿಸಿ, ಮಲ್ಟಿಪರ್ಪಸ್ ಟಕ್ನೀಷಿಯನ್ಸ್ ಅಸೋಸಿಯೇಷನ್ ವತಿಯಿಂದ ಉಪ ತಹಶೀಲ್ದಾರ್ ಪುಷ್ಪಾ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಅಸೋಸಿಯೇಷನ್ ಅಧ್ಯಕ್ಷ ಎಸ್.ಆರ್. ಕಣವಿ ಮಾತನಾಡಿ, ಬೇರೆಡೆಯಿಂದ ತಂದು ಈ ಜಾಗದಲ್ಲಿ ಅಳವಡಿಸಿರುವ ಈ ವಿದ್ಯುತ್ ಟ್ರಾನ್ಸ್ ಫಾರ್ಮರ್‌ನಿಂದಾಗಿ ರಸ್ತೆ ಬದಿ ಓಡಾಡುವ ಸಾರ್ವಜನಿಕರಗೂ, ವಾಹನ ಸವಾರರಿಗೂ ಮತ್ತು ವಾಣಿಜ್ಯ ಸಂಕೀರ್ಣದ ಬಾಡಿಗೆದಾರರಿಗೂ ಸಹ ತೊಂದರೆ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಮಳೆ ಗಾಳಿಗೆ ಹಾನಿಯಾಗುವ ಸಾಧ್ಯತೆಗಳು ಇರುವುದರಿಂದ ಈ ಕೂಡಲೇ ಅದನ್ನು ಬೇರೆಡೆಗೆ ವರ್ಗಾಯಿಸಬೇಕೆಂದು ಆಗ್ರಹಿಸಿದರು.
ಒಂದು ವೇಳೆ ಮುಂದಿನ ದಿನಗಳಲ್ಲಿ ಈ ಟ್ರಾನ್ಸ್‌ಫಾರ್ಮರ್‌ನಿಂದ ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆಯಾದಲ್ಲಿ ಅದಕ್ಕೆ ಬೆಸ್ಕಾಂ ಸೇರಿದಂತೆ ಸಂಬಂಧಪಟ್ಟ ಇಲಾಖೆಯವರೇ ನೇರ ಹೊಣೆಗಾರರಾಗಿರುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆ. ರಮೇಶ್, ಹಿದಾಯತ್, ನಾಗರಾಜ್, ಬಸವರಾಜ್, ರಂಜಿತ್, ಜಬಿಉಲ್ಲಾ, ಆನಂದ್, ಮುಲ್ಲಾ, ಇ ಬಸವರಾಜ್, ಅಕ್ಷಯ್, ಸಾಧಿಕ್, ಪಾನಿಪುರಿ ರಮೇಶ್, ಗೋಬಿ ರಮೇಶ್ ಇತರರು ಇದ್ದರು.