ದಾವಣಗೆರೆ, ಫೆ. 23 – ಮಹಾತ್ಮ ಗಾಂಧಿಯವರ ಪುಣ್ಯ ದಿನದ ಅಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಡೆದ ಹುತಾತ್ಮರ ದಿನಾಚರಣೆ ಸಮಾರಂಭದಲ್ಲಿ ಜೆ.ಹೆಚ್. ಪಟೇಲ್ ಬಡಾವಣೆಯ ಶಬರಿ ಸ್ತ್ರೀ ಸಂಘದ ಅಧ್ಯಕ್ಷರಾದ ಶ್ರೀಮತಿ ಪುಷ್ಪಾ ಅಜಯ್ ಮತ್ತು ವಸಂತಮ್ಮ ಚಂದ್ರಣ್ಣ ಅವರುಗಳನ್ನು ರೈತ ಸಂಘದ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜೆ.ಎಚ್. ಪಟೇಲ್ ಬಡಾವಣೆಯ ಪ್ರೇಮಲತಾ ರವಿಕುಮಾರ್, ಪ್ರವೀಣ ಚಂದ್ರಶೇಖರ್, ವಿಜಯ, ಶಿವಗಂಗಾ ನಾಗರಾಜ್, ಕಲ್ಪನಾ ಹಿರೇಮಠ್, ಆನಂದ ಗೌಡ್ರು, ಕೇರಂ ಗಣೇಶ್, ಮಿಯ್ಯಾಪುರದ ತಿರುಮಲೇಶ್, ಹೆಬ್ಬಾಳು ರಾಜಯೋಗಿ, ಸಾಣಿ ಕೆರೆ ಗುರುಮೂರ್ತಿ ಭಾಗವಹಿಸಿದ್ದರು.