ನವಜ್ಯೋತಿ ಸಾಂಸ್ಕೃತಿಕ ಸಂಸ್ಥೆಯಿಂದ ಸಾಧಕರಿಗೆ ಗೌರವ

ನವಜ್ಯೋತಿ ಸಾಂಸ್ಕೃತಿಕ ಸಂಸ್ಥೆಯಿಂದ ಸಾಧಕರಿಗೆ ಗೌರವ

ಹರಪನಹಳ್ಳಿ, ಫೆ. 23 – ಯಾವುದೇ ಪ್ರತಿಫಲ ಇಲ್ಲದೆ ನಿಸ್ವಾರ್ಥವಾಗಿ  ಸಮಾಜ ಮುಖಿ ಕಾರ್ಯಗಳನ್ನು ಮಾಡುವವರು ವಿರಳ.   ಲಾಭ- ನಷ್ಟದ ವಿಚಾರ ಮಾಡುವವರೇ ಹೆಚ್ಚು. ಆದರೆ, ಉಪನ್ಯಾಸಕ ಮಲ್ಲಿಕಾರ್ಜುನ ದಂಪತಿ ಮೌಲ್ಯಯುತವಾದ  ಚಟುವಟಿಕೆಗಳ ಮೂಲಕ ಸಮಾಜ ಮುಖಿಯಾಗಿದ್ದಾರೆ ಎಂದು ಸಬ್ ಇನ್‌ಸ್ಪೆಕ್ಟರ್ ಶಂಭುಲಿಂಗ ಹಿರೇಮಠ್ ಶ್ಲ್ಯಾಘಿಸಿದರು.

ಪಟ್ಟಣದ ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆ ವತಿಯಿಂದ  ಬಸಮ್ಮ ಕಲಾ ಮಂದಿರದಲ್ಲಿ  ಗಣರಾಜ್ಯೋತ್ಸವ, ಸ್ವಾಮಿ ವಿವೇಕಾನಂದ ಜಯಂತಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಾಧಕರಿಗೆ ಸನ್ಮಾನ  ಮತ್ತು ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಉಪನ್ಯಾಸಕ ಹೆಚ್.ಮಲ್ಲಿಕಾರ್ಜುನ್‌ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಸ್ವಾಮಿ ವಿವೇಕಾನಂದರ ಮತ್ತು ಸುಭಾಷ್ ಚಂದ್ರಭೋಸರ ತತ್ವ, ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ತಂದೆ-ತಾಯಿ, ನೆಚ್ಚಿನ ಗುರುಗಳು ಮತ್ತು ಸೈನಿಕರು ನಮ್ಮ ನೆಚ್ಚಿನ ಆದರ್ಶ ವ್ಯಕ್ತಿಗಳಾಗಬೇಕು ಎಂದರು. 

ಹರಪನಹಳ್ಳಿ ಕೆ.ಕೆ.ಆರ್.ಟಿ.ಸಿ. ಘಟಕ ವ್ಯವಸ್ಥಾಪಕರಾದ ಮಂಜುಳಾ ಎಂ. ಮಾತನಾಡಿ, ಕೆಲಸ ಮಾತಾಗಬೇಕು, ಮಾತೇ ಕೆಲಸವಾಗ ಬಾರದು, ಯಾವುದೇ ಕ್ಷೇತ್ರದಲ್ಲಿ ಸತತವಾಗಿ ಕೆಲಸ ಮಾಡಿದಲ್ಲಿ ಗುರಿ ತಲುಪಬಹುದು ಎಂದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಪ್ನ ಮಲ್ಲಿಕಾರ್ಜುನ ಮಾತನಾಡಿ, ಭಾರತ ಸಂವಿಧಾನ ಪ್ರಪಂಚ ದಲ್ಲಿಯೇ ಶ್ರೇಷ್ಠವಾದ ಸಂವಿಧಾನವಾಗಿದೆ.   ಇದು ಸರ್ವರಿಗೂ ಶಕ್ತಿ, ಸಮಾನತೆ ಮತ್ತು ಮೂಲಭೂತ ಹಕ್ಕುಗಳನ್ನು ಒದಗಿಸಿದೆ. ವಿವೇಕಾನಂದರು, `ದುಡ್ಡಿಲ್ಲದವನು ಬಡವನಲ್ಲ, ಗುರಿ ಮತ್ತು ಕನಸುಗಳಿಲ್ಲದವನು ನಿಜವಾದ ಬಡವ’ ಎಂದಿದ್ದಾರೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರೇರಕ ನುಡಿಗಳಂತೆ  ಜೀವನದಲ್ಲಿ ನಡೆದುಕೊಳ್ಳು ವವರು ನಮ್ಮ ಸೈನಿಕರು ಎಂದರು.

ಕಾರ್ಯಕ್ರಮವನ್ನು ಮಾಜಿ ಸೈನಿಕರಾದ ರಾಜ ಪೂಜಾರ್ ಮತ್ತು ಪೂಜಾರ್ ರೇಖಪ್ಪ ಉದ್ಘಾಟಿಸಿದರು. 

ಮಾಜಿ ಸೈನಿಕರಾದ  ಎ.ಆನಂದಪ್ಪ, ರಾಜ ಪೂಜಾರ್, ಪೂಜಾರ್ ರೇಖಪ್ಪ, ರವಿನಾಯ್ಕ, ಎಂ.ಡಿ ರಹಿಮಾನ್, ಓಬಳಾಪುರ ಚನ್ನಬಸಪ್ಪ, ಅಜ್ಜಪ್ಪ, ಗುರುಮಠ್, ಆನಂದರಾವ್ ಶಿಂಗ್ರಿ ಹಳ್ಳಿ, ಡಿಗ್ಗಿ ಹಾಲೇಶ್, ನಾಗರಾಜ ಅರಸಿಕೇರಿ, ಬಸವರಾಜ ಗುಂಡಗತ್ತಿ, ರವಿನಾಯ್ಕ ಇವರಿಗೆ `ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಕಾರ್ಯ ಕ್ರಮದಲ್ಲಿ ಎಸ್.ವಿ. ತ್ಯಾಗರಾಜ್, ಮುನೇ ಗೌಡ, ಕೆ.ಕೆ ಸೃಷ್ಠಿ, ಹೆಚ್.ತಿಲಕ್ ಇದ್ದರು.

error: Content is protected !!