ದಾವಣಗೆರೆ, ಫೆ. 21 – ನಗರದ ಪಿ.ಹಾಲೇಶಪ್ಪ ರಸ್ತೆಯ ಲ್ಲಿರುವ ರೈಲ್ವೆ ಕೆಳ ಸೇತುವೆ ಬಳಿಯ ಶ್ರೀ ಛತ್ರಪತಿ ಶಿವಾಜಿ ಮೂರ್ತಿಗೆ ಪುಷ್ಪಾರ್ಚನೆ ಮಾಡು ವುದರ ಮೂಲಕ ಶಿವಾಜಿ ಜಯಂತಿಯನ್ನು ಆಚರಿಸಲಾಯಿತು. ಉಪಮಹಾಪೌರರಾದ ಸೋಗಿ ಶಾಂತಕುಮಾರ್, ನಗರ ಪಾಲಿಕೆ ಮಾಜಿ ಸದಸ್ಯ ಪಿ.ಎನ್. ಚಂದ್ರಶೇಖರ್, ಪಿ.ಹೆಚ್. ರಾಜೇಶ್, ಸುಧೀರ ಮಾನೆ, ಎಸ್. ರವಿ, ಪಿ.ಹೆಚ್. ಮಹೇಶ, ಕನ್ನಡ ಹೋರಾಟಗಾರ ಪಿ. ಮಂಜುನಾಥ, ಬೆಂಡಿಗೆರೆ ವಿಜಯಕುಮಾರ್, ಕೆ. ಬಸವರಾಜ ಮಾನೆ, ವೆಂಕಟೇಶ್ ರಾಟೆ, ಚೌಡಪ್ಪ, ಪಕ್ಕೀರೇಶ ಮತ್ತಿತರರು ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ನಗರದಲ್ಲಿ ಶಿವಾಜಿ ಜಯಂತಿ ಆಚರಣೆ
