ವಿವೇಕರ ತತ್ವಾದರ್ಶಗಳು ಯುವ ಜನತೆಗೆ ಸ್ಫೂರ್ತಿ

ವಿವೇಕರ ತತ್ವಾದರ್ಶಗಳು ಯುವ ಜನತೆಗೆ ಸ್ಫೂರ್ತಿ

ದಾವಣಗೆರೆ, ಜ.20- ಶ್ರೇಷ್ಠ ದಾರ್ಶನಿಕ ಹಾಗೂ ಯುಗಪುರುಷರಾದ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳು ಯುವ ಜನತೆಗೆ ಸ್ಫೂರ್ತಿ ನೀಡಲಿವೆ ಎಂದು ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಎಂ. ಗುರುಸಿದ್ಧಸ್ವಾಮಿ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಯುವ ಸ್ಪಂದನದ ಸಂಯುಕ್ತಾಶ್ರಯದಲ್ಲಿ ಕ್ರೀಡಾ ವಸತಿ ನಿಲಯದಲ್ಲಿ ಈಚೆಗೆ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಪಂಚವೇ ಒಂದು ಗರಡಿ ಮನೆ. ನಾವಿಲ್ಲಿ ಜ್ಞಾನದ ಮೂಲಕ ಬಲಿಷ್ಠರಾಗಬೇಕಿದೆ. ಈ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದರು ತಿಳಿಸಿದಂತೆ ಯುವ ಸಮೂಹ ಶಕ್ತಿಶಾಲಿ ಹಾಗೂ ಶ್ರದ್ಧಾವಂತರಾಗಬೇಕು ಎಂದರು.

ಆಳಾಗಿ ದುಡಿಯುವುದನ್ನು ಕಲಿಯಬೇಕು. ಆಗ ನಾಯಕನಾಗುವ ಅರ್ಹತೆಗಳು ಬರು ತ್ತವೆ. ಮಾನವನ ಶಕ್ತಿ ಯಿಂದಲೇ ಪ್ರಪಂಚ ನಿಂತಿದ್ದು, ಆ ಶಕ್ತಿಯನ್ನು ದೇಶ ಕಟ್ಟಲು ಬಳಸಬೇಕು ಎಂದು ತಿಳಿಸಿದರು.

ಇಂದಿನ ಯುವ ಪೀಳಿಗೆ ದುಶ್ಚಟಗಳ ದಾಸರಾಗಿ ತಮ್ಮ ಬದುಕಿನ ಜತೆಗೆ ಇಡೀ ಕುಟುಂಬದ ಬದುಕನ್ನೂ ಹಾಳು ಮಾಡಿಕೊಳ್ಳುತ್ತಿ ದ್ದಾರೆ. ಚಿಕ್ಕ-ಚಿಕ್ಕ ವಿಷಯಗಳಿಗೆ ಆತ್ಮಹತ್ಯೆ ಕಡೆ ಮುಖ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸ್ವಾಮಿ ವಿವೇಕಾನಂದರ ತತ್ವಗಳನ್ನು ಯುವಕರಿಗೆ ಮನವರಿಕೆ ಮಾಡಿಸಿದರೆ. ತಪ್ಪು ದಾರಿಗೆ ಹೋಗುವ ಯುವಕರನ್ನು ತಡೆಯಬಹುದು. ಪ್ರತಿಯೊಬ್ಬ ಯುವಕ ದೇಶ ಕಟ್ಟುವ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಹೇಳಿದರು. ಈ ವೇಳೆ ಕ್ರೀಡಾ ವಸತಿ ನಿಲಯದ ಅಧೀಕ್ಷಕ ಕಾಶಿನಾಥ್, ಸಮಾಜ ಸೇವಕ ಶ್ರೀನಾಥ್, ನಿವೃತ್ತ ಮುಖ್ಯ ಶಿಕ್ಷಕ ಹೆಚ್.ಎಂ. ಪ್ರಕಾಶ್ ಇದ್ದರು. ವಿದ್ಯಾರ್ಥಿ ಬಸವರಾಜ್ ಪ್ರಾರ್ಥಿಸಿದರು. ಹೆಚ್.ಎಂ. ಯೋಗೇಶ್ ಸ್ವಾಗತಿಸಿದರು. ಎಸ್.ಬಿ. ಶಿಲ್ಪ ನಿರೂಪಿಸಿದರು.

error: Content is protected !!