ದಾವಣಗೆರೆ, ಜ.20- ನಗರದ ಬನಶಂಕರಿ ಬಡಾವಣೆಯಲ್ಲಿನ ಸ್ವಾಮಿ ವಿವೇಕಾನಂದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಕಳೆದ ವಾರ 35ನೇ ಶಾಲಾ ವಾರ್ಷಿಕೋತ್ಸವ ಸಂಭ್ರಮದಿಂದ ನಡೆಯಿತು.
ಮಕ್ಕಳ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಟೀಂ ಅಕಾಡೆಮಿಯ ಅಧ್ಯಕ್ಷ ಕೆ.ಎಂ. ಮಂಜಪ್ಪ, ಕಾರ್ಯದರ್ಶಿ ನಾಗಭೂಷಣ್, ಶಾಲೆಯ ಮುಖ್ಯ ಶಿಕ್ಷಕ ಪರಮೇಶ್ವರಪ್ಪ, ಸಹ ಶಿಕ್ಷಕರಾದ ರಾಜಶೇಖರ್, ಕಲ್ಲೇಶ್, ವಿಶ್ವನಾಥ್, ಮಂಜುಳಾ, ಮಂಜುಶ್ರೀ ಶಾಲೆಯ ಸಿಬ್ಬಂದಿ ಹಾಗೂ ಇದ್ದರು.