ಹಳೇಪೇಟೆ ಸರ್ಕಾರಿ ಶಾಲೆಯಲ್ಲಿ ಎಫ್ಎಲ್‌ಎನ್ ಕಲಿಕಾ ಹಬ್ಬ

ಹಳೇಪೇಟೆ ಸರ್ಕಾರಿ ಶಾಲೆಯಲ್ಲಿ ಎಫ್ಎಲ್‌ಎನ್ ಕಲಿಕಾ ಹಬ್ಬ

ದಾವಣಗೆರೆ, ಫೆ.20- ಕ್ಲಸ್ಟರ್ ಮಟ್ಟದ ಎಫ್ಎಲ್‌ಎನ್ ಕಲಿಕಾ ಹಬ್ಬವು ಸ್ಥಳೀಯ ಹಳೇಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಜರುಗಿತು. ಕ್ಲಸ್ಟರ್‌ನ ಸರ್ಕಾರಿ ಶಾಲೆಗಳಿಂದ ಒಂದರಿಂದ ಐದನೇ ತರಗತಿಯ ನೂರಕ್ಕೂ ಹೆಚ್ಚು ಮಕ್ಕಳು ಹಬ್ಬದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರೂ ಆದ ಹಿರಿಯ ಪತ್ರಿಕಾ ಪ್ರತಿನಿಧಿ ಕೋಡುಬಾಳು ಚನ್ನಬಸಪ್ಪ ಉದ್ಘಾಟಿಸಿದರು.  ಡಯಟ್ ಹಿರಿಯ ಉಪನ್ಯಾಸಕ ದಾರುಕೇಶ್ ಅವರು ಕಲಿಕಾ ಹಬ್ಬದ ಮಹತ್ವವನ್ನು ತಿಳಿಸಿದರು. 

ಸಿ.ಆರ್.ಪಿ. ಮಲ್ಲಿಕಾರ್ಜುನ ಕುಂದುವಾಡ ಅವರು ಕಲಿಕಾ ಹಬ್ಬದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕ ಲೋಕಣ್ಣ ಮಾಗೋಡ್ರ ಕಲಿಕಾ ಹಬ್ಬದ ಚಟುವಟಿಕೆಗಳ ಕುರಿತು ಎಲ್ಲರ ಗಮನ ಸೆಳೆದರು. 

ನಂತರ ಕಲಿಕಾ ಹಬ್ಬದ ಏಳು ಚಟುವಟಿಕೆಗಳಾದ ಗಟ್ಟಿ ಓದು, ಕಥೆ ಹೇಳುವುದು, ಕೈಬರಹ ಮತ್ತು ಕ್ಯಾಲಿಗ್ರಫಿ, ಸಂತೋಷದಾಯಕ ಗಣಿತ, ರಸ ಪ್ರಶ್ನೆ, ಪೋಷಕರು ಮತ್ತು ಮಕ್ಕಳ ಸಹ ಸಂಬಂಧ ಈ ಚಟುವಟಿಕೆಗಳಿಗೆ ಸ್ಪರ್ಧೆಗಳು ನಡೆದು ಕೊನೆಯಲ್ಲಿ ಗೆದ್ದಂತಹ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

error: Content is protected !!