ದಾವಣಗೆರೆ, ಫೆ. 20 – ನಗರದ ಶ್ರೀ ವಿನಾಯಕ ಎಜುಕೇಶನ್ ಟ್ರಸ್ಟ್, ಅಥಣಿ ಕಾಲೇಜು ಹಾಗೂ `ಚಿರಂತನ ಅಕಾಡೆಮಿ’ ಸಹಯೋಗದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ಆಯ್ಕೆಯಾದ ಪ್ರತಿಭೆಗಳಿಗೆ ಇದೇ ದಿನಾಂಕ 26 ಶಿವರಾತ್ರಿಯಂದು ಸಂಜೆ 7.30ರಿಂದ ರಾತ್ರಿ 11.30ರವರೆಗೆ ಎಸ್.ಎಸ್. ಬಡಾವಣೆಯಲ್ಲಿ ದಾವಣಗೆರೆಯ ಅತೀ ಎತ್ತರದ `ಶಿವ ಮೂರ್ತಿ’ ಇರುವ ಅಥಣಿ ಕಾಲೇಜಿನ ಆವರಣದಲ್ಲಿ ಭವ್ಯ ವೇದಿಕೆ ಕಲ್ಪಿಸಲಾಗುತ್ತದೆ.
ಸೋಲೋ ಅಥವಾ ತಂಡಗಳು ಭಾಗವಹಿಸಬಹುದು. 3 ರಿಂದ 10 ವರ್ಷದೊಳಗಿನ ಮಕ್ಕಳಿಗೆ `ಶಿವ ಪುರಾಣ’ದ ಯಾವುದೇ ಪಾತ್ರಗಳ ವೇಷಭೂಷಣ ಸ್ಪರ್ಧೆ, ವಚನ ಗಾಯನ ಮತ್ತು ಶ್ಲೋಕಗಳ ಸ್ಪರ್ಧೆ ನಡೆಯಲಿದೆ. 6 ರಿಂದ 16 ವರ್ಷ ಹಾಗೂ 16 ವರ್ಷ ಮೇಲ್ಪಟ್ಟ ವಿಭಾಗಗಳಲ್ಲಿ ಭರತನಾಟ್ಯ, ಭಕ್ತಿ ನೃತ್ಯ, ಭಕ್ತಿಗೀತೆ ಗಾಯನ ಸ್ಪರ್ಧೆ ನಡೆಯಲಿದ್ದು, ತಮ್ಮ ಕಲಾ ಪ್ರದರ್ಶನ ವಿಡಿಯೋವನ್ನು ವಾಟ್ಸಾಪ್ ಮುಖಾಂತರ `ಚಿರಂತನ’ ಕ್ಕೆ 9535656163ಗೆ ಕಳುಹಿಸಬೇಕು. ತೀರ್ಪುಗಾರರು ಆಯ್ಕೆ ಮಾಡುವ ತಂಡ ಅಥವಾ ಸೋಲೋ ಪ್ರತಿಭೆಗಳಿಗೆ ಪ್ರಮಾಣ ಪತ್ರ, ಬಹುಮಾನವನ್ನು ನೀಡಲಾಗುವುದು.
ಶಿವ ಭಕ್ತಿಯೊಂದಿಗೆ ನೃತ್ಯ ಸಂಗೀತ ಸೇವೆಯನ್ನು ಮಾಡುವ ಅವಕಾಶ ಈ ಬಾರಿ ಕಲ್ಪಿಸಲಾಗಿದ್ದು, ದಾವಣಗೆರೆ ಪ್ರತಿಭೆಗಳನ್ನು ಗುರುತಿಸಲಾಗುತ್ತಿದೆ. ನಿಮ್ಮ ವಿಡಿಯೋ ಅಡಿಷನ್‌ಗೆ ಕಳುಹಿಸಲು ಇದೇ ದಿನಾಂಕ 22 ಕೊನೆಯ ದಿನವಾಗಿದೆ.