ಹರಿಹರ, ಫೆ.19- ತಾಲ್ಲೂಕಿನ ಬನ್ನಿಕೋಡು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಈಚೆಗೆ 2008-09ನೇ ಸಾಲಿನ ಎಸ್ಸೆಸ್ಸೆಲ್ಸಿ ಹಳೇ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಬನ್ನಿಕೋಡು, ಬೇವಿನಹಳ್ಳಿ ಮತ್ತು ಸಲಗನಹಳ್ಳಿ ಗ್ರಾಮದ ಹಳೇ ವಿದ್ಯಾರ್ಥಿಗಳು ಇದ್ದರು.
ಕಾರ್ಯಕ್ರಮದ ವೇಳೆ ಭೂ-ದಾನಿಗಳಾದ ಕುಲ್ಡಾಲಪ್ಪರ ಬಸಪ್ಪ, ಪಾರವರ್ ಸಂಕಪ್ಪ ಮತ್ತು ಮಕ್ಕಳು, ನಿವೃತ್ತ ಶಿಕ್ಷಕ ಟಿ. ಚನ್ನಬಸಪ್ಪ, ನಿವೃತ್ತ ಶಿಕ್ಷಕರಾದ ಬಿ. ಉಮೇಶ್, ಎ. ಅನ್ನಪೂರ್ಣ, ಟಿ. ಚನ್ನಬಸಪ್ಪ, ಬಿ.ಎಸ್ ಶಿಲ್ಪ, ಉಮಾ ಪಾಳ್ಯದ, ಪ್ರಮೋದ್ ಪಾಟೀಲ್, ಶಿಕ್ಷಕರಾದ ಹೆಚ್. ಸುಧಾ, ಆರ್. ಸುಧಾ, ಟಿ.ಎಂ. ಜೋತಿ ಇದ್ದರು.