ಅರಸೀಕೆರೆಯಲ್ಲಿ ಇಂದು ಕೊಟ್ಟೂರು ಪಾದಯಾತ್ರಿಗಳಿಗೆ ಔಷಧೋಪಚಾರ

ಅರಸೀಕೆರೆಯಲ್ಲಿ ಇಂದು ಕೊಟ್ಟೂರು  ಪಾದಯಾತ್ರಿಗಳಿಗೆ ಔಷಧೋಪಚಾರ

ಕೊಟ್ಟೂರು ಗುರುಬಸವ ರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್‌ ವತಿಯಿಂದ  ಇಂದು  46ನೇ ವರ್ಷದ ಸಮಗ್ರ ಪಾದಯಾತ್ರೆ ಬೀಳ್ಕೊಡುವ ಸಮಾರಂಭ ಹಾಗೂ `27ನೇ ವರ್ಷದ ಔಷಧೋಪಚಾರ ಸೇವೆಯ ಸಮಾರೋಪ’ ನಡೆಯಲಿದೆ.

ಇಂದು ಸಂಜೆ 5 ಗಂಟೆಗೆ ಅರಸೀಕೆರೆ ಕೋಲಶಾಂತೇಶ್ವರ ವಿರಕ್ತಮಠದಲ್ಲಿ `27ನೇ ವರ್ಷದ ಔಷಧೋಪಚಾರ ಸೇವೆಯ ಸಮಾರೋಪ’ ನಡೆಯಲಿದ್ದು, ಕೋಲಶಾಂತೇಶ್ವರ ವಿರಕ್ತ ಮಠದ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಪಾದಯಾತ್ರೆ ಟ್ರಸ್ಟಿನ ಗೌರವಾಧ್ಯಕ್ಷ ಡಾ.ಅಥಣಿ ಎಸ್‌. ವೀರಣ್ಣ, ಜಿ.ಎ. ಗಂಗಾಧರ ಸ್ವಾಮಿ, ಜಿ.ಪಿ. ರವಿ ಪ್ರಸಾದ್‌, ಡಾ.ಕೆ. ಸಿದ್ದಪ್ಪ, ಎಂ.ಎಸ್‌. ಗೀತಾ, ಎಸ್‌.ಆರ್‌. ಪ್ರಸನ್ನ ಕುಮಾರ್‌, ಡಾ.ಬಿ.ಯು. ಯೋಗೇಂದ್ರ ಕುಮಾರ್‌ ಪಾಲ್ಗೊಳ್ಳಲಿದ್ದಾರೆ.

error: Content is protected !!