ಜಗಳೂರು, ಫೆ.19- ತಾಲ್ಲೂಕಿನ ಅಸಗೋಡು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ರಾಧಮ್ಮ ಕುಬೇರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಎಸ್ ಟಿ ಮೀಸಲು ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ತುಪ್ಪದಹಳ್ಳಿ ಗ್ರಾಮದ ರಾಧಮ್ಮ ಕುಬೇರಪ್ಪ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದು. ನಾಮಪತ್ರ ಊರ್ಜಿತವಾಗಿದ್ದು, ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿ ಕಾರಿಯಾಗಿದ್ದ ಲೋಕೋಪಯೋಗಿ ಇಲಾಖೆ ಎಇಇ ನಾಗರಾಜ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷೆ ನಾಗಮ್ಮ ಚನ್ನಬಸಪ್ಪ, ಗ್ರಾ.ಪಂ.ಉಪಾಧ್ಯಕ್ಷೆ ಶಕುಂತಲಾ ತಿಮ್ಮೇಶ್, ಸದಸ್ಯರಾದ ಜೆ.ಎಂ. ರವಿಕುಮಾರ್, ವೀರಮ್ಮ, ಜಿ.ಎನ್. ಶಿಲ್ಪ, ರೇಣುಕಮ್ಮ, ನಾಗರಾಜ್, ಸರೋಜಮ್ಮ, ಲಲಿತಮ್ಮ, ಹೆಚ್.ಆರ್. ಬಸವರಾಜಪ್ಪ, ಬಸವರಾಜ್, ಎಂ. ಶಂಕರಪ್ಪ, ರೇಷ್ಮಾ, ನಸ್ರುಲ್ಲಾ, ಶಂಭುಲಿಂಗಪ್ಪ, ಮಂಜಮ್ಮ, ಪಿಡಿಓ ಮರುಳಸಿದ್ದಪ್ಪ ಇದ್ದರು.