ಹೊನ್ನಾಳಿ, ಫೆ. 19- ತಾಲ್ಲೂಕು ಪಿಕಾರ್ಡ್ ಬ್ಯಾಂಕನ ಅಧ್ಯಕ್ಷರಾಗಿ ಅರಬಗಟ್ಟೆ ಕೆ.ಜಿ. ರಮೇಶ, ಉಪಾಧ್ಯಕ್ಷರಾಗಿ ಹೊಟ್ಯಾಪುರ ರುದ್ರಮ್ಮ ಅವರು ಅವಿರೋಧ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ನವೀನ್ ಕುಮಾರ ತಿಳಿಸಿದ್ದಾರೆ.
ಬುಧವಾರ ನಡೆದ ನೂತನ ಅವಧಿಯ ಮೊದಲನೇ ಅಧ್ಯಕ್ಷ ಉಪಾ ಧ್ಯಕ್ಷರ ಆಯ್ಕೆ ಪ್ರಕ್ರಿಯೆ ಯಲ್ಲಿ ಅವರು ಆಯ್ಕೆಗೊಂಡರು.
ಪಿಕಾರ್ಡ್ ಬ್ಯಾಂಕ್ ನೂತನ ನಿರ್ದೇಶಕರಾದ ಹೊನ್ನಾಳಿ ಕೆ.ವಿ. ನಾಗರಾಜ, ರಾಘವೇಂದ್ರ, ಕುಂದೂರು ಎಂ.ಜಿ.ಆರ್. ಮಂಜುನಾಥ, ಕೆಂಚಿಕೊಪ್ಪ ಜಿ. ಶಂಕ್ರಪ್ಪ, ಚಿನ್ನಿಕಟ್ಟಿ ಕೆ.ಚೇತನ, ಚೀಲಾಪುರ ಸಿದ್ದಪ್ಪ, ಹರಳಹಳ್ಳಿ ಸುನೀಲ, ಗಂಟ್ಯಾಪುರ ಕುಬೇರನಾಯ್ಕ, ಮಹಿಳಾ ನಿರ್ದೇಶಕರಾಗಿ ಕೋಟೆ ಮಲ್ಲೂರು ಅನಸೂಯಮ್ಮ, ಚಿಕ್ಕೇರಳ್ಳಿ ಆಶಾ ಆಯ್ಕೆಯಾಗಿದ್ದಾರೆ.