ದಾವಣಗೆರೆ, ಫೆ. 18- ನಿಟುವಳ್ಳಿಯ ಎಸ್‌ಜೆಎಂ ಶಾಲೆಯಲ್ಲಿ ಕಡಿಮೆ ಶುಲ್ಕದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿರುವುದು ಶ್ಲ್ಯಾಘನೀಯ ಎಂದು ಮಹಾಪೌರ ಕೆ. ಚಮನ್‌ಸಾಬ್ ಹೇಳಿದರು.
ಎಸ್‌ಜೆಎಂ ಪಬ್ಲಿಕ್ ಶಾಲೆಯ 20ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಅವರು ಮಾತನಾಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಈ ಶಾಲೆಯ ಆಡಳಿತ ಮಂಡಳಿ ಸಿಎ ಸೈಟಿಗೆ ಬೇಡಿಕೆ ಇಟ್ಟಿದ್ದು, ಸಿಎ ಸೈಟನ್ನು ಕೊಡಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದರು.
ನಗರಸಭೆ ಮಾಜಿ ಅಧ್ಯಕ್ಷ ಆರ್.ಎಲ್. ನಾಗಭೂಷಣ್ ಮಾತನಾಡಿ, ಸಂಸ್ಥೆಯ ಕಾರ್ಯದರ್ಶಿ ಡಿ. ಮಹೇಶ್ವರಪ್ಪ ಅವರ ಶ್ರೀಮತಿ ಪುಷ್ಪಾ ಅವರು ತುಂಬಾ ಕಷ್ಟದಿಂದ ಸಂಸ್ಥೆಯನ್ನು ಬೆಳೆಸಿಕೊಂಡು ಬಂದಿದ್ದಾರೆ. ಇವರ ಸಹಾಯಕ್ಕೆ ಸದಾ ಬೆಂಬಲವಾಗಿ ನಿಲ್ಲುತ್ತೇನೆ ಎಂದರು.
ಉಪ ಮಹಾಪೌರ ಸೋಗಿ ಶಾಂತಕುಮಾರ್ ಮಾತನಾಡಿ, ಸ್ಪರ್ಧಾತ್ಮಕ ಕಾಲವಾದ ಇಂದು ದೊಡ್ಡ ದೊಡ್ಡ ಶಾಲೆಗಳ ಮಧ್ಯೆ ಈ ಶಾಲೆಯ ಶಿಕ್ಷಣ ಸೇವೆ ತುಂಬಾ ಸಮಾಜಮುಖಿ ಕೆಲಸವಾಗಿದೆ. ಸಂಸ್ಥೆ ಇನ್ನು ದೊಡ್ಡದಾಗಿ ಬೆಳೆದು ಹೆಚ್ಚಿನ ಪ್ರತಿಭಾವಂತ ವಿದ್ಯಾರ್ಥಿಗಳು ಸಂಸ್ಥೆಯಿಂದ ಹೊರಬರಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ರೇಣುಕಾ ಶ್ರೀನಿವಾಸ ಅವರ ಪತಿ ಶ್ರೀನಿವಾಸ ಉಪಸ್ಥಿತರಿದ್ದು ಮಾತನಾಡಿದರು.
ವೇದಿಕೆಯ ಮೇಲೆ ರಾಜೇಶ್ ಹುಲಿಕಟ್ಟಿ, ಶ್ರೀಮತಿ ಪುಷ್ಪಾ ಉಪಸ್ಥಿತರಿದ್ದರು.ಮಂಗಳ ಗೌರಮ್ಮ ಪ್ರಾರ್ಥಿಸಿದರು. ಕೆ.ಎಸ್. ಕೊಟ್ರೇಶ್ ಸ್ವಾಗತಿಸಿದರು. ಸಿದ್ದೇಶ್ ನಿರೂಪಿಸಿದರು.