ನಗರದಲ್ಲಿ ಇಂದು ಕೊಟ್ಟೂರು ಪಾದಯಾತ್ರಿಗಳಿಗೆ ಬೀಳ್ಕೊಡುಗೆ

ನಗರದಲ್ಲಿ ಇಂದು ಕೊಟ್ಟೂರು ಪಾದಯಾತ್ರಿಗಳಿಗೆ ಬೀಳ್ಕೊಡುಗೆ

ಕೊಟ್ಟೂರು ಗುರುಬಸವ ರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್‌ ವತಿಯಿಂದ  ಇಂದು ಮತ್ತು ನಾಳೆ 46ನೇ ವರ್ಷದ ಸಮಗ್ರ ಪಾದಯಾತ್ರೆ ಬೀಳ್ಕೊಡುವ ಸಮಾರಂಭ ಹಾಗೂ `27ನೇ ವರ್ಷದ ಔಷಧೋಪಚಾರ ಸೇವೆಯ ಸಮಾರೋಪ’ ನಡೆಯಲಿದೆ.

ಇಂದು ಸಂಜೆ 5 ಗಂಟೆಗೆ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿ ದೇವಸ್ಥಾನ ಆವರಣದಲ್ಲಿ   ಪಾದಯಾತ್ರೆ ಬೀಳ್ಕೊಡುವ ಸಮಾರಂಭ ನಡೆಯಲಿದೆ. ಹೆಬ್ಬಾಳು ವಿರಕ್ತ ಮಠದ  ರುದ್ರೇಶ್ವರ ಶ್ರೀಗಳು, ವಿರಕ್ತ ಮಠದ ಡಾ. ಬಸವಪ್ರಭು ಸ್ವಾಮೀಜಿ, ಅಯ್ಯನಹಳ್ಳಿ ರಂಭಾಪುರಿ ಶಾಖಾ ಮಠದ ಮಹೇಶ್ವರ ಶಿವಾಚಾರ್ಯ ಶ್ರೀ, ಕೊಟ್ಟೂರು ಹಿರೇಮಠದ ಶಿವಪ್ರಕಾಶ ಸ್ವಾಮೀಜಿ ಹಾಗೂ ಕೋಣಂದೂರು ಬೃಹನ್ಮಠದ ಪಂಡಿತಾರಾಧ್ಯ ಶಿವಾ ಚಾರ್ಯ ಶ್ರೀಗಳು ಸಾನಿಧ್ಯ ವಹಿಸುವರು. ಟ್ರಸ್ಟಿನ ಗೌರವಾಧ್ಯಕ್ಷ ಡಾ.ಅಥಣಿ ಎಸ್‌. ವೀರಣ್ಣ, ಶಾಸಕ ಶಾಮನೂರು ಶಿವಶಂಕರಪ್ಪ, ಎಸ್‌.ಎಸ್. ಮಲ್ಲಿಕಾರ್ಜುನ್‌ ಹಾಗೂ ಡಾ. ಪ್ರಭಾ ಮಲ್ಲಿಕಾರ್ಜುನ್‌, ಜಿ.ಎಂ. ಗಂಗಾಧರ ಸ್ವಾಮಿ ಭಾಗವಹಿಸುವರು.

ನಾಳೆ ಗುರುವಾರ ಸಂಜೆ 5 ಗಂಟೆಗೆ ಅರಸೀಕೆರೆ ಕೋಲಶಾಂತೇಶ್ವರ ವಿರಕ್ತಮಠದಲ್ಲಿ `27ನೇ ವರ್ಷದ ಔಷಧೋಪಚಾರ ಸೇವೆಯ ಸಮಾರೋಪ’ ನಡೆಯಲಿದ್ದು, ಕೋಲಶಾಂತೇಶ್ವರ ವಿರಕ್ತ ಮಠದ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಪಾದಯಾತ್ರೆ ಟ್ರಸ್ಟಿನ ಗೌರವಾಧ್ಯಕ್ಷ ಡಾ.ಅಥಣಿ ಎಸ್‌. ವೀರಣ್ಣ, ಜಿ.ಎ. ಗಂಗಾಧರ ಸ್ವಾಮಿ, ಜಿ.ಪಿ. ರವಿ ಪ್ರಸಾದ್‌, ಡಾ.ಕೆ. ಸಿದ್ದಪ್ಪ, ಎಂ.ಎಸ್‌. ಗೀತಾ, ಎಸ್‌.ಆರ್‌. ಪ್ರಸನ್ನ ಕುಮಾರ್‌, ಡಾ.ಬಿ.ಯು. ಯೋಗೇಂದ್ರ ಕುಮಾರ್‌ ಪಾಲ್ಗೊಳ್ಳಲಿದ್ದಾರೆ.

error: Content is protected !!