ದಾವಣಗೆರೆ, ಫೆ. 18- ಡಾ. ಹೆಚ್.ಎಫ್.ಕಟ್ಟೀಮನಿ ಪ್ರೌಢಶಿಕ್ಷಣ ಪ್ರತಿಷ್ಠಾನ, ಅಪರ ಆಯುಕ್ತರ ಕಛೇರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಧಾರವಾಡ ಹಾಗೂ ಇದರ ದಾವಣಗೆರೆ ಘಟಕ ಮತ್ತು ಮಹಿಳಾ ಸೇವಾ ಸಮಾಜ ಪ್ರೌಢಶಾಲೆಯ ಸಂಯುಕ್ತಾಶ್ರಯದಲ್ಲಿ ವಿಶಿಷ್ಟ ಶಾಲಾ ಕಾರ್ಯಕ್ರಮದಡಿಯಲ್ಲಿ ವಿದ್ಯಾರ್ಥಿಗಳ ಸದಭಿರುಚಿ ವಿಕಾಸ ಕಾರ್ಯಕ್ರಮ ಚಟುವಟಿಕೆಗಳ ಸಮಾ ರೋಪ ಸಮಾರಂಭವನ್ನು ಮಹಿಳಾ ಸೇವಾ ಸಮಾಜ ಪ್ರೌಢಶಾಲೆಯಲ್ಲಿ ನಡೆಸ ಲಾಯಿತು. ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ನೀಲಗುಂದ ಜಯಮ್ಮ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ತಜ್ಞ ಡಾ. ಸಿ.ಆರ್. ಬಾಣಾಪುರ ಮಠ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಎಸ್ಎಸ್ಐಎಂಎಸ್ ಮಕ್ಕಳ ವಿಭಾಗದ ಪ್ರಾಧ್ಯಾಪಕರಾದ ಡಾ. ಲತಾ ಜಿ.ಎಸ್. ಮಾತನಾಡಿದರು.
ಬೂಸ್ನೂರು ಪ್ರಕಾಶ್ ಸ್ವಾಗತಿಸಿದರು. ಎಸ್.ಪಿ. ರಾಜಪ್ಪ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಜ್ಯೋತಿ ಟಿ. ವಂದಿಸಿದರು.
ಮುಖ್ಯೋಪಾಧ್ಯಾಯರಾದ ಆರ್. ದಾಕ್ಷಾಯಣಮ್ಮ ಹಾಗೂ ಮಹಿಳಾ ಸೇವಾ ಸಮಾಜದ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು.