ನಾಳೆ ಸರ್ಕಾರಿ ನೌಕರರ ಸಮಾವೇಶ

ನಾಳೆ ಸರ್ಕಾರಿ ನೌಕರರ ಸಮಾವೇಶ

ದಾವಣಗೆರೆ, ಫೆ. 18- ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ದಿಂದ ನಾಡಿದ್ದು ದಿನಾಂಕ 20ರಂದು ಬೆಳಿಗ್ಗೆ 11.30ಕ್ಕೆ ಬೆಂಗಳೂರಿನ ತ್ರಿಪುರ ವಾಸಿನಿ ಅರಮನೆ ಆವರಣದಲ್ಲಿ ಸಂಘದ ಚುನಾಯಿತ ನಿರ್ದೇಶಕರು ಹಾಗೂ ಪದಾಧಿಕಾರಿಗಳ ಸಮಾವೇಶ ಮತ್ತು ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು. ಅಧ್ಯಕ್ಷತೆಯನ್ನು ರಾಜ್ಯ ಅಧ್ಯಕ್ಷ ಸಿ. ಎಸ್. ಷಡಕ್ಷರಿ ಅವರು  ವಹಿಸಲಿದ್ದು, ಅಂದು ಬೆಳಿಗ್ಗೆ 10 ಗಂಟೆಗೆ ಲೋಕಾಯುಕ್ತ ನ್ಯಾಯಮೂರ್ತಿ  ಬಿ. ಎಸ್. ಪಾಟೀಲ್ ಆಡಳಿತದಲ್ಲಿ ದಕ್ಷತೆ, ಪಾರದಕ್ಷತೆ, ಪ್ರಾಮಾಣಿಕತೆ ಕುರಿತು ಉಪನ್ಯಾಸ ನೀಡಲಿದ್ದಾರೆ. 

ಸಾರ್ವಜನಿಕ ಸೇವೆಯಲ್ಲಿ ನೌಕರರ ಪಾತ್ರದ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀಮತಿ ಶಾಲಿನಿ ರಜನೀಶ್ ಉಪನ್ಯಾಸ ನೀಡಲಿದ್ದಾರೆ. ಮಾಹಿತಿ ಹಕ್ಕು ಅಧಿನಿಯಮ    ಪರಿಹಾರ ಕುರಿತು ರಾಜ್ಯ ಮಾಹಿತಿ ಆಯೋಗ ಕಲಬುರ್ಗಿ ಪೀಠದ ಆಯುಕ್ತ ರವೀಂದ್ರನಾಥ್ ತಾಕಪ್ಪ  ಉಪನ್ಯಾಸ ನೀಡಲಿದ್ದಾರೆ ಎಂದು ಸಂಘದ ದಾವಣಗೆರೆ ಜಿಲ್ಲಾ ಅಧ್ಯಕ್ಷ ವೀರೇಶ್ ಎಸ್. ಒಡೇನಪುರ ತಿಳಿಸಿದ್ದಾರೆ.

error: Content is protected !!