ದಾವಣಗೆರೆ, ಫೆ. 19- ನಗರದ ಐಎಂಎ ಮಹಿಳಾ ವಿಭಾಗದಿಂದ ಸಂಗೀತ ಸಂಜೆ ಕಾರ್ಯಕ್ರಮವನ್ನು ಐಎಂಎ ಹಾಲ್‌ನಲ್ಲಿ ನಿನ್ನೆ ನಡೆಸಲಾಯಿತು. ಶ್ರೀಮತಿ ಸಹನಾ ಮಂಜುನಾಥ್ ಮುಖ್ಯ ಅತಿಥಿಗಳಾಗಿ ಆಗಮಿಸಿ, ತಮ್ಮ ಸುಮಧುರ ಕಂಠದಿಂದ ಹಾಡುಗಳನ್ನು ಹಾಡಿ ಸದಸ್ಯರನ್ನು ರಂಜಿಸಿದರು. ಐಎಂಎ ಮಹಿಳಾ ವಿಭಾಗದ ಅಧ್ಯಕ್ಷರಾದ ತ್ರಿವೇಣಿ ಮಲ್ಲೇಶ್, ಕಾರ್ಯದರ್ಶಿ ಶಿವಪ್ರಭ ದೊಡ್ಡಿಕೊಪ್ಪ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರೇಮಾ ಮಹೇಶ್, ಸುಮಂಗಲ ಸಂಗಮೇಶ್, ರೇಖಾ ಸುದರ್ಶನ್, ಉಮಾದೇವಿ ಹಿರೇಮಠ, ನಮ್ರತಾ ವಿಜಯ ಹಾಗೂ ವಿಜಯಲಕ್ಷ್ಮಿ ಚಂದ್ರಪ್ಪ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.