ಹರಪನಹಳ್ಳಿ ತಾಲ್ಲೂಕಿಗೆ ಕೆಎಸ್ಸಾರ್ಟಿಸಿ 11 ಬಸ್

ಹರಪನಹಳ್ಳಿ ತಾಲ್ಲೂಕಿಗೆ ಕೆಎಸ್ಸಾರ್ಟಿಸಿ 11 ಬಸ್

ಶಾಸಕರಾದ ಲತಾ ಮಲ್ಲಿಕಾರ್ಜುನ್ ಅವರ ಇಚ್ಚಾಶಕ್ತಿಯಿಂದ ನೀಡಿರುವ 11 ಬಸ್‌ಗಳಿಂದ 286 ಹಳ್ಳಿಗಳ ಗ್ರಾಮಸ್ಥರಿಗೆ ಅನುಕೂಲ.

– ರಾಜಪ್ಪ, ವ್ಯವಸ್ಥಾಪಕ ನಿರ್ದೇಶಕರು, ಕೆಎಸ್ಸಾರ್ಟಿಸಿ

ಹರಪನಹಳ್ಳಿ, ಫೆ. 17  – ತಾಲ್ಲೂಕಿನ ಸಾರ್ವ ಜನಿಕರು ಹಾಗೂ ಶಾಲಾ ಮಕ್ಕಳಿಗೆ ಅನುಕೂಲ ವಾಗುವ ಉದ್ದೇಶದಿಂದ ಕಲ್ಯಾಣ ಕರ್ನಾಟಕ  ಪ್ರದೇಶ ಅಭಿವೃದ್ಧಿ ಮಂಡಳಿಯಿಂದ 11 ಬಸ್ ನೀಡಲಾಗಿದೆ ಎಂದು ಶಾಸಕರಾದ ಶ್ರೀಮತಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಹರ್ಷ ವ್ಯಕ್ತ ಪಡಿಸಿದರು.

ಪಟ್ಟಣದ ಐ.ಬಿ. ವೃತ್ತದಲ್ಲಿ ನೂತನ 11 ಬಸ್ ಗಳಿಗೆ ಚಾಲನೆ, 250 ಜನ ಆಶಾ ಕಾರ್ಯಕರ್ತೆಯರಿಗೆ ಉಚಿತ ಸಮವಸ್ತ್ರ ವಿತರಣೆ, ದೇವರಾಜು ಅರಸು ಅಭಿವೃದ್ದಿ ಯೋಜನೆಯಡಿ  25 ಜನ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ, ಪರಿಶಿಷ್ಠ ಪಂಗಡದ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಸಹಾಯಧನ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಹರಪನಹಳ್ಳಿಯು 371ಜೆ ಕಲ್ಯಾಣ ಕರ್ನಾಟಕ ವ್ಯಾಪ್ತಿಯಡಿ, ಸೇರ್ಪಡೆಗೊಂಡು ನಂತರ ಶೈಕ್ಷಣಿಕವಾಗಿ ಅತಿ ಹೆಚ್ಚು ಮಕ್ಕಳು ಮುಂದುವರೆ ಯುತ್ತಿರುವುದು ಸಂತಸದ ಸಂಗತಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಕಲಿಕೆಗೆ ಯಾವುದೆ ತೊಂದರೆ ಉಂಟಾಗದೆ ಶಿಕ್ಷಣ ಮುಂದುವರೆಸಲು ಸಾರಿಗೆ ಸೌಕರ್ಯ ಅತ್ಯಗತ್ಯವೆಂದರು.

ವಿದ್ಯಾರ್ಥಿಗಳು ಅಷ್ಠೇ ಅಲ್ಲದೇ ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಬರುವ ಕೂಲಿ ಕಾರ್ಮಿಕರಿಗೆ ಶಕ್ತಿ ಯೋಜನೆಯಿಂದ ಸಾಕಷ್ಟು ಅನುಕೂಲವಾಗಿದೆ. ಅದರಂತೆ ಪಟ್ಟಣದ ಜನತೆಗೆ ಇನ್ನೂ ಮೂರು, ನಾಲ್ಕು ತಿಂಗಳೊಳಗೆ ನೂತನ ಸಿಟಿ ಬಸ್ ಸೌಕರ್ಯ ಒದಗಿಸಲಾಗವುದು.

ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೆಶಕ ರಾಚಪ್ಪ ಮಾತನಾಡಿ, ಶಾಸಕರ ಇಚ್ಚಾಶಕ್ತಿಯಿಂದ ಇಂದು ತಾಲ್ಲೂಕಿಗೆ ನೂತನ ಬಸ್‌ಗಳು ಬಿಡುತ್ತಿ ದ್ದೇವೆ, ತಾಲ್ಲೂಕಿನ 286 ಹಳ್ಳಿಗಳಿಗೆ ಇದುವರೆಗೆ ಸಾರಿಗೆ ವ್ಯವಸ್ಥೆ ಅಸ್ಥವ್ಯಸ್ಥವಾಗಿತ್ತು. ನೂತನ ಬಸ್‌ಗಳ ಆಗಮನದಿಂದ ತೊಂದರೆ ನಿವಾರಣೆಯಾಗಿದೆ, ರಾಜ್ಯದಲ್ಲಿ ಶಕ್ತಿ ಯೋಜನೆಯಿಂದ ಕೆ.ಎಸ್.ಆರ್. ಟಿ.ಸಿ. ನಿಗಮಕ್ಕೆ ಉಸಿರು ಬಂದಂತಾಗಿದೆ, ನಿಗಮಕ್ಕೆ ಯಾವುದೇ ನಷ್ಟವಿಲ್ಲ ಜನರ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಶಿವಮೂರ್ತಿ ಮಾತನಾಡಿ, ರಾಜ್ಯ ಪಂಚಗ್ಯಾರಂಟಿ ಯೋಜನೆಗಳಿಂದ ಎಲ್ಲಾ ವರ್ಗದ ಜನತೆಯು ನೆಮ್ಮದಿಯಿಂದ ಜೀವಿಸುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಬದ್ದತೆಯೆ ಕಾರಣವಾಗಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಕುಬೇರ ಗೌಡ, ಗ್ಯಾರಂಟಿ ಅನುಷ್ಠಾನ ಯೋಜನೆಯ ಜಿಲ್ಲಾ ಸಮಿತಿಯ ಅಧ್ಯಕ್ಷ ಶಿವಮೂರ್ತಿ ಮಾತನಾಡಿದರು.

ಸಾರಿಗೆ ನಿಗಮದ ಡಿಸಿ ತಿಮ್ಮಾರೆಡ್ಡಿ, ತಹಶೀ ಲ್ದಾರ್ ಬಿ.ವಿ. ಗಿರೀಶ್ ಬಾಬು, ಡಿಪೋ ವ್ಯವಸ್ಥಾಪಕ ರಾದ ಮಂಜುಳಾ, ಪುರಸಭೆ ಅಧ್ಯಕ್ಷೆ ಫಾತೀಮಾ ಬಿ, ಉಪಾಧ್ಯಕ್ಷ ಎಚ್. ಕೊಟ್ರೇಶ್, ಪುರಸಭೆ  ಅಧ್ಯಕ್ಷ  ಪಾತೀಮ ಶೇಕ್ಷಾವಲಿ   ಸದಸ್ಯರುಗಳಾದ  ಟಿ. ವೆಂಕಟೇಶ, ಡಿ. ಅಬ್ದುಲ್, ರಹಮಾನ್ ಸಾಬ್,  ಉದ್ದಾರ್ ಗಣೇಶ, ಜಾಕೀರ್ ಸರ್ಕವಾಸ್, ಲಾಟಿ ದಾದಪೀರ್  ಮುಖ್ಯಾಧಿಕಾರಿ ಎರಗುಡಿ ಶಿವಕು ಮಾರ್, ಬಿಇಓ ಹೆಚ್ ಲೇಪಾಕ್ಷಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷ ಉದಯಶಂಕರ್, ಹಾಗೂ ಇತರರಿದ್ದರು.

error: Content is protected !!