ದಾವಣಗೆರೆ, ಫೆ. 17- ಈಚೆಗೆ ಮಧುರೈ, ತಮಿಳುನಾಡಿನಲ್ಲಿ ನಡೆದ 24ನೇ ರಾಷ್ಟ್ರಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್‍ನಲ್ಲಿ ನಗರದ ಸ್ಕೇಟರ್‌ಗಳಾದ ಫಲಕ್ ನಿಗಾರ್ 2000 ಮೀಟರ್ ಓಟದಲ್ಲಿ ಕಂಚಿನ ಪದಕ, ರಿಲೇಯಲ್ಲಿ ಕಂಚಿನ ಪದಕಗಳನ್ನು ಪಡೆದು ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅರುಣ್ ಕೆ.ಪಿ. ರಿಲೇಯಲ್ಲಿ ಬೆಳ್ಳಿ ಪದಕ, ಶೌರ್ಯ ಜಿ. ಶೆಟ್ಟಿ ರಿಲೇಯಲ್ಲಿ ಬಂಗಾರದ ಪದಕ, ಚಿರಂತ್ ಜಿ.ಎಸ್. ರಿಲೇಯಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.