ಲಯನ್ಸ್‌ನಿಂದ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿ

ಲಯನ್ಸ್‌ನಿಂದ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿ

ದಾವಣಗೆರೆ, ಫೆ. 17- ದಾವಣಗೆರೆ ಲಯನ್ಸ್ ಕ್ಲಬ್  ಮತ್ತು  ನ್ಯೂ ದಾವಣಗೆರೆ ಡಿಸ್ಟ್ರಿಕ್ಟ್ ಚೆಸ್ ಅಸೋಸಿಯೇಷನ್ ಇವರ ಸಂಯುಕ್ತಾಶ್ರಯದಲ್ಲಿ ನಗರದ ಲಯನ್ಸ್ ಭವನದಲ್ಲಿ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿ ನೆರವೇರಿತು.

ಸಮಾರಂಭದ ಅಧ್ಯಕ್ಷತೆಯನ್ನು ಚೆಸ್ ಅಸೋಸಿಯೇಷನ್ ಅಧ್ಯಕ್ಷರೂ ಆದ ಹಿರಿಯ ನ್ಯಾಯವಾದಿ ಎ.ಎಂ. ಹೆಗಡೆ ವಹಿಸಿದ್ದರು. 

ಪಂದ್ಯಾವಳಿಯ ಉದ್ಘಾಟಕರಾಗಿ ಆಗಮಿಸಿದ್ದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ರಾಜೇಶ್ವರಿ ಎಂ. ಹೆಗಡೆ ಅವರು ಮಾತನಾಡಿ, ಮಕ್ಕಳ ಬೌದ್ಧಿಕ ವಿಕಾಸಕ್ಕೆ ಚದುರಂಗ ಆಟದ ಮಹತ್ವವನ್ನು ಕುರಿತು ಮತ್ತು ಶೈಕ್ಷಣಿಕವಾಗಿ ಮಕ್ಕಳ ಬೌದ್ಧಿಕ ಬೆಳವಣಿಗೆಯಲ್ಲಿ ಚೆಸ್ ಆಟದಿಂದ ಉಂಟಾಗುವ ಏಕಾಗ್ರತೆ ಕುರಿತು ಹೇಳಿದರು. 

ಮುಖ್ಯ ಅತಿಥಿಗಳಾಗಿ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಶೆಟ್ಟಿ, ಲಯನ್ಸ್ ಅಧ್ಯಕ್ಷ  ಎಸ್.ಜಿ. ಉಳುವಯ್ಯ, ಕಾರ್ಯದರ್ಶಿ ಸಿ. ಅಜಯ್ ನಾರಾಯಣ್, ಶಿಕ್ಷಣ ಇಲಾಖೆಯ ಉಪನಿರ್ದೇಶಕ  ಜಿ. ಕೊಟ್ರೇಶ್, ಡಾ. ಎಸ್.ಆರ್. ಹೆಗಡೆ, ಎಂ.ಎಸ್. ಮೃತ್ಯುಂಜಯ, ಮದನ್ ಕುಮಾರ್, ಲ. ಬೆಳ್ಳೂಡಿ ಶಿವಕುಮಾರ್, ಸತೀಶ್, ಸತೀಶ್ ಚಂದ್ರ, ಶ್ರೀಪಾದ್   ಭಾಗವಹಿಸಿದ್ದರು.  ಶ್ರೀಮತಿ ನಿರ್ಮಲ ಮತ್ತು ಶ್ರೀಮತಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.

error: Content is protected !!