ದಾವಣಗೆರೆ, ಫೆ. 17- ಮಾರಣಾಂತಿಕ ರೋಗಳಿಂದ ನರಳಿ ಸಾಯುವ ಹಂಚಿನಲ್ಲಿರುವ ರೋಗಿಗಳು ಗೌರವಯುತವಾಗಿ ಮರಣ ಹೊಂದಲು ದಯಾಮರಣ, ಇಚ್ಛಮರಣದಂತಹ ಐತಿಹಾಸಿಕ ಕಾನೂನನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದ್ದು, ಅದರ ಕಾನೂನು ಪ್ರಕ್ರಿಯೆಗಳನ್ನು ಬಹಿರಂಗಪಡಿಸಬೇಕು. ಈ ಕಾನೂನು ಪ್ರಕ್ರಿಯೆಗೆ ಒಳಗಾಗುವ ಮೊದಲ ಮಹಿಳೆ ನಾನುಗುತ್ತೇನೆ ಎಂದು ನಿವೃತ್ತ ಶಿಕ್ಷಕಿಯೂ ಆಗಿರುವ ದಯಾ ಮರಣದ ಹೋರಾಟಗಾರ್ತಿ ಶ್ರೀಮತಿ ಹೆಚ್.ಬಿ.ಕರಿಬಸಮ್ಮ ಅವರು ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಪ್ರಕ್ರಿಯೆ ಬಡವರ ಪಾಲಿನ ದೇಗುಲವಾದ ಸರ್ಕಾರಿ ಆಸ್ಪತ್ರೆಯಲ್ಲಿಯೇ ಈ ಕಾನೂನಿನ ವ್ಯವಸ್ಥೆಯಾಗಬೇಕೆಂಬ ಬೇಡಿಕೆ ನನ್ನದು. ಆಸ್ಪತ್ರೆಯಲ್ಲಿ ಒಂದು ಕೊಠಡಿ ಬಾಗಿಲ ಮೇಲೆ ದಯಾಮರಣ ನಿಗಾ ಘಟಕ ಎಂದು ಬರೆದಿರಬೇಕು. ದಯಾಮರಣಕ್ಕೆ ಒಳಗಾದ ವ್ಯಕ್ತಿ ಮಲಗಿರುವಾಗ ವೈದ್ಯರು ತಮ್ಮನ್ನು ಪರೀಕ್ಷಿಸುತ್ತಿರುಬಾಗ ರೋಗಿ ಅಸಹಾಯಕರಾಗಿ ಸುತ್ತಲೂ ನೋಟ ಬೀರುತ್ತಾ ಯಾತನೆ ಅನುಭವಿಸುವಾಗ ಸುತ್ತಲೂ ಕಣ್ಣಾಡಿಸಿದಾಗ ಶಾಂತಿ ದೊರೆಯಲು ಗೋಡೆಯ ಮೇಲೆ ಎಲ್ಲಾ ಧರ್ಮದವರ ಧಾರ್ಮಿಕ ಫೋಟೋಗಳನ್ನು ಹಾಕಿರಬೇಕು ಎಂದು ಮನವಿ ಮಾಡಿದರು.
ಹಸಿರು ಮಿಶ್ರಿತ ಬಣ್ಣ ಬಣ್ಣದ ಅಲಂಕಾರಿಕ ಹೂವಿನ ಕುಂಡಗಳನ್ನು ಇಡುವುದರಿಂದ ಕೃತಕ ಪ್ರಕೃತಿ ಸೃಷ್ಠಿಸಿದಂತಾಗುತ್ತದೆ. ಮಂದ ಬೆಳಕಿನಲ್ಲಿ ಮೆಲುದನಿಯ ಇಂಪಾದ ಸಂಗೀತ ನಾದ ಕೇಳಿವಂತಿರಬೇಕು. ಈ ಎಲ್ಲಾವುಗಳಿಂದ ದೇಹ ಎಷ್ಟೇ ಶಿಥಿಲ ವ್ಯವಸ್ಥೆಯಲ್ಲಿದ್ದರೂ, ನೋವಿದ್ದರೂ ಒಂದು ಮುಗುಳು ನಗೆಯಿಂದ ದಯಾಮರಣ ಸಾವನ್ನು ಅಪ್ಪಿಕೊಂಡಂತಾಗುತ್ತದೆ ಎಂದು ಸುಮ್ಮನಾದರೂ ಈಗ ಅಲ್ಪಸ್ವಲ್ಪ ನನ್ನ ಕೆಲಸ ಮಾಡಿಕೊಳ್ಳುವ ಸ್ಥಿತಿಯಲ್ಲದ್ದೇನೆ. ಮುಂದೆ ರೋಗಗಳು ಉಲ್ಬಣವಾಗಿ ಪರಾವಲಂಬಿಯಾಗಿ ಯಾತನಮಯ ಬದುಕು ಬೇಡವಾಗಿದೆ ಎಂದರು.
ಕಾನೂನು ಬರುವ ಮೊದಲೇ ಸ್ವ ಇಚ್ಚೆಯಿಂದ ಮರಣ ಹೊಂದಲು ಉಪವಾಸ ಕೈಗೊಂಡಿದ್ದೆ. ಈಗ ಕಾನೂನು ಬಂದಾಗಿದೆ. ವಯೋವೃದ್ಧರಲ್ಲಿ ಮೊದಲಿನವಳಾಗಿ ಈ ಕಾನೂನಿಗೆ ಒಳಗಾಗಲು ಆತ್ಮ ಸಂತೋಷದಿಂದ ಸಿದ್ಧಳಿದ್ದೇನೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿಜಯಕುಮಾರಿ, ಹೆಚ್.ವಿ.ವೆಂಕಟೇಶ್ ಇದ್ದರು.