ಬಸವ ಬಳಗ, ಜಾಗತಿಕ ಲಿಂಗಾಯತ ಮಹಾಸಭಾ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ವಿರಕ್ತ ಮಠ ಹಾಗೂ ಬಸವ ಕಲಾಲೋಕ ಬಸಾಪುರ ಸಹಯೋಗದಲ್ಲಿ ಡಾ. ಶ್ರೀ ಬಸವಪ್ರಭು ಸ್ವಾಮೀಜಿ ನೇತೃತ್ವದಲ್ಲಿ ರೈಲ್ವೆ ಅಂಡರ್ ಬ್ರಿಡ್ಜ್ ಬಳಿ ಕರ್ನಾಟಕ ಗಾಂಧೀ ಶರಣ ಶ್ರೀ ಹರ್ಡೇಕರ್ ಮಂಜಪ್ಪನವರ 139ನೇ ಜಯಂತಿ ಇಂದು ಬೆಳಿಗ್ಗೆ 8ಕ್ಕೆ ಆಚರಿಸಲಾಗುವುದು.
ಶ್ರೀ ಬಸವ ಪ್ರಭು ಸ್ವಾಮೀಜಿ, ಆಲಮಟ್ಟಿ ವೀರಭದ್ರಪ್ಪ ಮಹಾಮಲ್ಲಪ್ಪ ಪಟ್ಟಣ ಶೆಟ್ಟಿ ಗಾಂಧೀ ವಾದಿ ಹರ್ಡೇಕರ್ ಮಂಜಪ್ಪ ಸ್ಮಾರಕ ಭವನದ ಕಾರ್ಯದರ್ಶಿಗಳು, ಬಸವ ಬಳಗದ ಅಧ್ಯಕ್ಷ ಎ.ಹೆಚ್. ಹುಚ್ಚಪ್ಪ ಮಾಸ್ಟರ್, ಕೆ.ಬಿ. ಪರಮೇಶ್ವರಪ್ಪ. ಕುಸುಮ ಲೋಕೇಶ್ ಗಾಯತ್ರಿ ವಸ್ತ್ರದ್, ಗೋಪನಾಳ್ ರುದ್ರಗೌಡ್ರು, ಅಗಡಿ ಮಹಾಂತೇಶ್, ಶರಣೆ ವೀಣಾ ಮಂಜುನಾಥ್, ಪಾಲಿಕೆ ಉಪಮೇಯರ್ ಸೋಗಿ ಶಾಂತಕುಮಾರ್ ಭಾಗವಹಿಸುವರು.