ರಾಣೇಬೆನ್ನೂರು,ಫೆ.14- ತಾಲ್ಲೂಕಿನ ಲಿಂಗ ದಹಳ್ಳಿ ಸಂಸ್ಥಾನದ ಹಿರೇಮಠದಲ್ಲಿ ನಾಳೆ ದಿನಾಂಕ 15 ರ ಶನಿವಾರ ಶ್ರೀ ಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳಿಂದ ಜಗತ್ತಿನಲ್ಲಿಯೇ ದೊಡ್ಡದಾದ ಸ್ಪಟಿಕ ಶಿವಲಿಂಗದ ಪ್ರತಿಷ್ಠಾಪನೆ ಹಾಗೂ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ ಎಂದು ಪೀಠಾಧಿಪತಿ ಶ್ರೀ ವೀರಭದ್ರ ಸ್ವಾಮೀಜಿ ತಿಳಿಸಿದರು.
ನಂತರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ನಡೆಯುವ ಧರ್ಮಸಭೆಯಲ್ಲಿ ಹೊನ್ನಾಳಿ ಹಿರೇಕಲ್ಮಠದ ಚನ್ನಮಲ್ಲಿಕಾರ್ಜುನ ಶ್ರೀಗಳು, ತೊಗರ್ಸಿ ಮಹಾಂತ ಶ್ರೀ ಗಳು, ತೊಗರ್ಸಿ ಚನ್ನವೀರ ಶ್ರೀಗಳು, ಕೋಣಂದೂರು ಶ್ರೀಪತಿ ಪಂಡಿತಾರಾಧ್ಯ ಶ್ರೀಗಳು, ದಿಂಡದಹಳ್ಳಿ ಪ
ಶುಪತಿ ಶಿವಾನಂದ ಶ್ರೀಗಳು, ಮಣಕೂರ ಮಲ್ಲಿಕಾರ್ಜುನ ಶ್ರೀಗಳು ಪಾಲ್ಗೊಳ್ಳುವರು. ನಾಡಿನ ಕಲೆ, ಧರ್ಮ, ಸಂಸ್ಕೃತಿ ಕುರಿತು ಚಲನಚಿತ್ರ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಉಪನ್ಯಾಸ ನೀಡುವರು.
ಉಪಸಭಾಪತಿ ರುದ್ರಪ್ಪ ಲಮಾಣಿ, ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಸಚಿವ ಎಚ್.ಕೆ.ಪಾಟೀಲ, ಶಾಸಕ ಪ್ರಕಾಶ ಕೋಳಿವಾಡ, ಯು.ಬಿ.ಬಣಕಾರ, ಕೆಪಿಟಿಸಿಎಲ್ ಅಧ್ಯಕ್ಷ ಅಜ್ಜಂಪೂರ ಖಾದ್ರಿ, ಜೆಡಿಎಸ್ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಶಾಸಕ ಅರುಣಕುಮಾರ್ ಪೂಜಾರ, ಜಿಪಂ ಮಾಜಿ ಸದಸ್ಯ ಸಂತೋಷ ಪಾಟೀಲ, ಕಾಕಿ ಜನಸೇವಾ ಟ್ರಸ್ಟ್ ಅಧ್ಯಕ್ಷೆ ರೂಪಾ ಕಾಕಿ ಮತ್ತಿತರರು ಆಗಮಿಸುವರು.
ನಂತರ ನಡೆಯುವ ರೈತ ನಕ್ಷತ್ರಗಳ ಸಮಾವೇಶದಲ್ಲಿ ರೈತ ಮುಖಂಡರಾದ ಆರ್.ಎಚ್.ಪಾಟೀಲ, ರವೀಂದ್ರಗೌಡ ಪಾಟೀಲ, ಹನುಮಂತಪ್ಪ ಕಬ್ಬಾರ, ಈರಣ್ಣ ಹಲಗೇರಿ, ಪತ್ರಕರ್ತ ಕೆ.ಎಸ್.ನಾಗರಾಜ, ಬಸವರಾಜ ಅರಬಗೊಂಡ, ಸಿ.ಸಿ.ಪಾಟೀಲ, ರಾಮಣ್ಣ ಕೆಂಚಳ್ಳೇರ, ಮಲ್ಲಿಕಾರ್ಜುನ ಬಳ್ಳಾರಿ, ಪ್ರಭು ತಳವಾರ, ಪಂಚಪ್ಪ ಮಾಗನೂರ ಮತ್ತಿತರರು ಭಾಗವಹಿಸುವರು.
ಮಾರ್ಚ್ 13ರಂದು ರೇಣುಕಾ ಜಯಂತಿ ಕಾರ್ಯಕ್ರಮಗಳು ಜರುಗುವವು. ಮಾ. 17ರಂದು ನಡೆಯುವ ವೀರಭದ್ರ ಶ್ರೀಗಳ 60ನೇ ವರ್ಷದ ಷಷ್ಠ್ಯಬ್ದಿ ಸಮಾರಂಭದ ನಿಮಿತ್ತ್ಯ ಫೆಬ್ರವರಿ 26 ರಿಂದ ಮಾರ್ಚ್ 10ವರೆಗೆ ಸ್ಪಟಿಕ ಶಿವಲಿಂಗ ಹಾಗೂ ಪಚ್ಚೆ ಶಿವಲಿಂಗಗಳಿಗೆ ಲಕ್ಷ ಬಿಲ್ವಾರ್ಚನೆ, ಪುಷ್ಪಾರ್ಚನೆ ನಡೆಯುವುದು.