ಮಲೇಬೆನ್ನೂರು, ಫೆ.13- ಕರ್ನಾಟಕ ರಾಧಸುರಭಿ ಗೋ ಮಂದಿರ ಮತ್ತು ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್, ಬಂಟ್ವಾಳ ತಾಲ್ಲೂಕು ಇವರ ವತಿಯಿಂದ ಆರಂಭವಾಗಿರುವ ನಂದಿ ರಥಯಾತ್ರೆಯು ಕರ್ನಾಟಕ ರಾಜ್ಯಾದ್ಯಂತ ದಿನಾಂಕ 31.12.2024 ರಿಂದ 29.03.2025 ರವರೆಗೆ ಸಂಚರಿಸಲಿದ್ದು, ಗುರುವಾರ ನಂದಿಗುಡಿ ಗ್ರಾಮಕ್ಕೆ ಆಗಮಿಸಿದಾಗ ಶಾಸಕ ಬಿ.ಪಿ. ಹರೀಶ್ ಸ್ವಾಗತಿಸಿದರು. ಮಹಿಳೆಯರು ಆರತಿ ಬೆಳಗಿದರು.
ಈ ಸಂದರ್ಭದಲ್ಲಿ ಹರಿಹರ ತಾ. ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟ ಲಿಂಗರಾಜ್, ಜಿ.ಪಂ.ಮಾಜಿ ಸದಸ್ಯ ಸಿ.ಎನ್.ವೀರಭದ್ರಪ್ಪ, ಗ್ರಾಮ ಪಂಚಾಯತಿ ಸದಸ್ಯ ಕೆಂಚವೀರಯ್ಯ, ಮುಖಂಡ ಶಿವಾಲಯ್ಯ, ಶ್ರೀಕಾಂತ್, ಆದಾಪುರದ ವಿಜಯಕುಮಾರ್ ಮತ್ತು ಇತರರು ಉಪಸ್ಥಿತರಿದ್ದರು.