ದಾವಣಗೆರೆ, ಫೆ. 14 – ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಬಿಜೆಎಸ್ ಭಾರತೀಯ ಜೈನ ಸಂಘಟನೆ, ದಾವಣಗೆರೆ ಚಾಪ್ಟರ್ ಹಾಗೂ ರೋಟರಿ ಕ್ಲಬ್ ಮಿಡ್‌ಟೌನ್ ದಾವಣಗೆರೆ, ರೋಟರಿ ಕ್ಲಬ್ ದಾವಣಗೆರೆ ಮತ್ತು ಸುಕ್ಷೇಮ ಆಸ್ಪತ್ರೆಯ ಸಹಕಾರದಿಂದ ಮಹಿಳೆಯರಿಗಾಗಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿತ್ತು.
ಈ ಶಿಬಿರದಲ್ಲಿ ಸಾಮಾನ್ಯ ತಪಾಸಣೆ, ರಕ್ತ ಮತ್ತು ಥೈರಾಯ್ಡ್ ಪರೀಕ್ಷೆಯ ಜೊತೆಗೆ ಕಾಲ್ಪೊಸ್ಕೊಪಿ, ಪ್ಯಾಪ್ ಸ್ಮೀಯರ್ ಪರೀಕ್ಷೆ, ಮ್ಯಾಮೋಗ್ರಾಮ್, ಸೋನೋಮ್ಯಾಮೋಗ್ರಾಫಿ ಸೇರಿದಂತೆ ವಿವಿಧ ತಪಾಸಣೆಗಳನ್ನು ನಡೆಸಲಾಯಿತು.
ಸುಕ್ಷೇಮ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಎಸ್. ಎಂ. ಬ್ಯಾಡಗಿ, ಡಾ. ಸುನೀಲ್ ಬ್ಯಾಡಗಿ ಮತ್ತು ಅವರ ತಂಡದವರು ಮಹಿಳೆಯರಿಗೆ ಉಚಿತ ವೈದ್ಯಕೀಯ ತಪಾಸಣೆಗಳನ್ನು ನಡೆಸಿದರು. ಶಿಬಿರದ ಆಯೋಜನೆಯನ್ನು ಭಾವನಾ ಮೆಹತಾ (ಪಿಂಕಿ), ಮಮತಾ ಗುಂಡೇಶಾ, ನೆಹಾ ನಾಹಟಾ, ದೀಪಾ, ತಾರಾ, ಅಲ್ಕಾ ಅವರು ನಿರ್ವಹಿಸಿದರು.
ಅಶೋಕ್ ಶ್ರೀಮಾಲ್, ಅಶೋಕ್ ವನೇಚಂದ್‌ಜಿ, ಸುನೀಲ್ ಓಸ್ವಾಲ್, ಪ್ರೀತಂ ಜೈನ್, ದೀಪಕ್ ಬೋಹ್ರಾ, ರೋಟರಿ ಕ್ಲಬ್ ಮಿಡ್ಟೌನ್ ಅಧ್ಯಕ್ಷ ಡಾ. ವಿ.ಎಲ್.ಜಯಸಿಂಹ, ಕಾರ್ಯದರ್ಶಿ ಮಲ್ಲಿಕಾರ್ಜುನ್ ಹೋಳಿ ಹಾಗೂ ಇತರರು ಶಿಬಿರದಲ್ಲಿ ಭಾಗವಹಿಸಿದ್ದರು.