ಜಾಗತಿಕ ಆರ್ಥಿಕ ಶಕ್ತಿಯಾಗಿ ಭಾರತಕ್ಕೆ 3ನೇ ಸ್ಥಾನ

ಜಾಗತಿಕ ಆರ್ಥಿಕ ಶಕ್ತಿಯಾಗಿ ಭಾರತಕ್ಕೆ 3ನೇ ಸ್ಥಾನ

ಶಿವಮೊಗ್ಗ, ಫೆ. 13- ಜಾಗತಿಕವಾಗಿ ಆರ್ಥಿಕ ಶಕ್ತಿಯಾಗಿ ಭಾರತ 3ನೇ ಸ್ಥಾನಕ್ಕೆ ಬರಲು ಹಣಕಾಸು ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಲೋಕ ಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಇಲ್ಲಿನ ಸಹ್ಯಾದ್ರಿ ಚಿಟ್ಸ್‌ನ ನೂತನ ಕಚೇರಿ ಉದ್ಘಾ ಟನಾ ಸಮಾರಂಭದಲ್ಲಿ ಮಾತನಾಡಿ, ಭಾರತವು ಮೂರನೇ ಆರ್ಥಿಕ ಶಕ್ತಿಯಾಗಿ ಬೆಳೆಯಲು ಪ್ರಧಾನ ಮಂತ್ರಿ ಮೋದಿಯವರು ಮಾಡುತ್ತಿರುವ ಪ್ರಯತ್ನಕ್ಕೆ ಚಿಕ್ಕ ಚಿಕ್ಕ ಹಣಕಾಸು ಸಂಸ್ಥೆಗಳು ಬಹು ಮುಖ್ಯಪಾತ್ರ ವಹಿಸುತ್ತವೆ ಎಂದು ತಿಳಿಸಿದರು.

ಶಾಸಕ ಎಸ್.ಎನ್. ಚನ್ನಬಸಪ್ಪ, ಸಿನಿಮಾ ನಟ ದಿಗಂತ್‌, ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ರಮೇಶ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಚೇರ್ಮನ್ ಬದ್ರಿನಾಥ್ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ ಬಿ.ಗೋಪಿನಾಥ್, ಕಾಂಗ್ರೆಸ್ ಮುಖಂಡ ಎಚ್.ಸಿ.ಯೋಗೀಶ್, ಉದ್ಯಮಿ ಅಶ್ವತ್ಥ್‌ ನಾರಾಯಣ ಶೆಟ್ಟಿ, ಸಂಸ್ಥೆಯ ಮೂಲ ಸಂಸ್ಥಾಪಕ ಡಿ.ಎಲ್.ನಟರಾಜ್, ಮಾರ್ಕೆಟಿಂಗ್ ಡೈರೆಕ್ಟರ್ ಶಿವರಾಜ್ ಉಡುಗಣಿ, ಟಿ.ಎಸ್‌. ಬದರೀನಾಥ್‌, ರಮೇಶ್‌ ಎಂ.ಭಟ್‌ ಮತ್ತು ಇತರರು ಹಾಜರಿದ್ದರು. ಸಂಸ್ಥೆ ನಿರ್ದೇಶಕ ಜಿ.ವಿಜಯಕುಮಾರ್ ಸ್ವಾಗತಿಸಿದರು. ರವೀಂದ್ರನಾಥ್ ಐತಾಳ್ ವಂದಿಸಿದರು.

error: Content is protected !!