ದಾವಣಗೆರೆ, ಫೆ. 13 – ನಗರದ ಎಸ್.ಬಿ.ಸಿ. ಮಹಿಳಾ ಕಾಲೇಜು ಮತ್ತು ಅಥಣಿ ಸ್ನಾತಕೋತ್ತರ ಕೇಂದ್ರಕ್ಕೆ ದಾವಣಗೆರೆ ವಿಶ್ವವಿದ್ಯಾ ನಿಲಯದ ಎಂ.ಎ ಇಂಗ್ಲಿಷ್ ವಿಭಾಗದಲ್ಲಿ 2023-24ನೇ ಸಾಲಿನಲ್ಲಿ ವಿದ್ಯಾರ್ಥಿನಿಯರಾದ ಖಾನ್ ಹಮೀದಾ 3ನೇ ರ‍್ಯಾಂಕ್ ಮತ್ತು ಪೂರ್ಣಿಮಾ ವಿ.ಎಸ್. 5ನೇ ರಾಂಕ್ ಗಳಿಸಿರುತ್ತಾರೆ. ರ‍್ಯಾಂಕ್ ಗಳಿಸಿ ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿನಿಯರುಗಳಿಗೆ ವಿನಾಯಕ ಎಜುಕೇಷನ್ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಶೈಲ ಜಗದ್ಗುರುಗಳು, ಅಥಣಿ ಸ್ನಾತಕೋತ್ತರ ಕೇಂದ್ರದ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ಅಧ್ಯಕ್ಷ ಅಥಣಿ ವೀರಣ್ಣ, ಎಸ್.ಬಿ.ಸಿ ಕಾಲೇಜಿನ ಅಧ್ಯಕ್ಷ ಬಿ.ಸಿ ಉಮಾಪತಿ, ಕಾರ್ಯದರ್ಶಿ ಎನ್.ಎ ಮುರುಗೇಶ್ ಹಾಗೂ ಟ್ರಸ್ಟಿನ ಎಲ್ಲಾ ಸದಸ್ಯರುಗಳು ಹಾಗೂ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಅಭಿನಂದಿಸಿದ್ದಾರೆ.
ಎಸ್‌ಬಿಸಿ ಕಾಲೇಜು -ಅಥಣಿ ಕೇಂದ್ರಕ್ಕೆ ಎರಡು ರ‍್ಯಾಂಕ್
