ನೇಕಾರ ಸಮಾಜದ ಕಟ್ಟಡ ನಿರ್ಮಾಣಕ್ಕೆ ಕ್ರಮ
– ಎಸ್.ಟಿ.ಪಿ. ತಿಪ್ಪೇಶ್, ಅಧ್ಯಕ್ಷರು, ಪದ್ಮಸಾಲಿ ಸಮಾಜ
ದಾವಣಗೆರೆ, ಫೆ. 13- ನೇಕಾರ ಸಮಾಜ ಒಗ್ಗಟ್ಟಿನಲ್ಲಿ ಕೊರತೆ ಕಾಣಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಮುಂದೆ ಬಂದು ಒಗ್ಗಟ್ಟನ್ನು ನಾವು ತೋರಿಸಬೇಕು. ಹಾಗೂ ಈಗ ನಡೆಯುತ್ತಿರುವ ಇಂತಹ ಕ್ರೀಡೆಗಳಿಗೆ ಪ್ರೋತ್ಸಾಹಿಸಬೇಕು ಎಂದು ಪದ್ಮಶಾಲಿ ಸಮಾಜದ ಅಧ್ಯಕ್ಷ ಎಸ್ಟಿಪಿ ತಿಪ್ಪೇಸ್ವಾಮಿ ತಿಳಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮೊನ್ನೆ ಏರ್ಪಾಡಾಗಿದ್ದ ರಾಜ್ಯಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ -ನೇಕಾರ ಕಪ್ 2025 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ನೇಕಾರ ಸಮಾಜದ ಬಂಧುಗಳು ಸೇರಿ ಸಭೆ ಸೇರಿ ನೇಕಾರ ಸಮಾಜದ ಕಟ್ಟಡ ನಿರ್ಮಿಸುವಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಪ್ಪೇಸ್ವಾಮಿ ತಿಳಿಸಿದರು.
ಕುರುಹಿನ ಶೆಟ್ಟಿ ಸಮಾಜದ ಅಧ್ಯಕ್ಷ ಆರ್.ಹೆಚ್. ನಾಗಭೂಷಣ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಡಾ. ಈಶ್ವರಾನಂದ ಸ್ವಾಮೀಜಿ, ಪ್ರೊ. ಎಲ್. ಸತ್ಯನಾರಾಯಣ, ಧರ್ಮರಾಜ ಏಕಬೋಟೆ, ಜೆ.ಎನ್. ಶ್ರೀನಿವಾಸ, ಎನ್.ವಿ. ರುದ್ರಮುನಿ, ಡಿ.ಸಿ. ಶ್ರೀನಿವಾಸ ಚಿನ್ನಿಕಟ್ಟೆ, ಲತಾ ಎನ್. ರಾಮಚಂದ್ರಪ್ಪ ಕೆ.ಜಿ., ನಾಗರಾಜ್ ಎಸ್. ಬಡದಾಳ್, ಶ್ರೀಕಾಂತ್ ಕಾಕಿ ಮತ್ತು ಹೆಚ್.ಎಸ್. ಸುಧೀರ್ ಉಪಸ್ಥಿತರಿದ್ದರು.
ನೇಕಾರ ಕಪ್ 2025ರ ಪ್ರಥಮ ಬಹುಮಾನವನ್ನು ದಾವಣಗೆರೆಯ ನೇಕಾರ ಲೆವೆನ್ ತಂಡ, ದ್ವಿತೀಯ ಬಹುಮಾನವನ್ನು ಇಳಕಲ್ನ ಸನ್ ಆಫ್ ನೇಕಾರ ಹಾಗೂ ತೃತೀಯ ಬಹುಮಾನವನ್ನು ಮನು 11 ದೊಡ್ಡಬಳ್ಳಾಪುರ, ಕೋನಮನಹಳ್ಳಿ ಚಿತ್ರದುರ್ಗ ಜಿಲ್ಲೆ ಇವರು ಪಡೆದುಕೊಂಡಿರುತ್ತಾರೆ. ನಗರದ ಕುರುಹಿನಶೆಟ್ಟಿ (ನೇಕಾರ) ಸಮಾಜದವರು ಪ್ರಥಮ ಬಹುಮಾನದ ದಾನಿಗಳಾಗಿದ್ದಾರೆ.
ಇದೇ ಸಂದರ್ಭದಲ್ಲಿ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ (ಬೆಂಗಳೂರು) ಉಮಾದೇವಿ ರೇವಣ್ಣ, ಹಾಗೂ ಜೆ.ಹೆಚ್. ಪಟೇಲ್ ಕಾಲೇಜಿನ ಕಾರ್ಯದರ್ಶಿ ಮುಸ್ತಾಫ್ ಅವರುಗಳಿಗೆ ಸನ್ಮಾನಿಸಿ, ಗೌರವಿಸಲಾಯಿತು.