ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮವು ಕೊಡಗನೂರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಇಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ.
ಶ್ರೀಮತಿ ಕೆ.ಎಂ. ಗೀತಾ ಅಧ್ಯಕ್ಷತೆ ವಹಿಸುವರು. `ವಿದ್ಯೆ ಬಾಳಿನ ಬೆಳಕು’ ವಿಷಯ ಕುರಿತು ಎಸ್.ಆರ್. ನಯನಜ ಮೂರ್ತಿ ಉಪನ್ಯಾಸ ನೀಡುವರು. ದಾಗಿನಕಟ್ಟೆ ಪರಮೇಶ್ವರಪ್ಪ, ಷಡಕ್ಷರಪ್ಪ ಎಂ. ಬೇತೂರು, ಶ್ರೀಮತಿ ಪರಿಮಳ ಜಗದೀಶ್ ಉಪಸ್ಥಿತರಿರುವರು. ತಾಲ್ಲೂಕು ಕಸಾಪ ಅಧ್ಯಕ್ಷರಾದ ಶ್ರೀಮತಿ ಸುಮತಿ ಜಯಪ್ಪ ಪ್ರಾಸ್ತಾವಿಕ ನುಡಿಗಳನ್ನಾಡುವರು.
ಕೊಡಗನೂರು ಶ್ರೀಮತಿ ನಿಂಗಮ್ಮ ಮತ್ತು ಅಜ್ಜಪ್ಪಗೌಡ್ರ ಸ್ಮರಣಾರ್ಥ ದತ್ತಿ ದಾನಿಗಳು ಶ್ರೀಮತಿ ಕೆ.ಎಸ್. ಶೈಲ, ಶ್ರೀಮತಿ ಕೆ.ಎಸ್. ಪೂರ್ಣಿಮಾ, ಪ್ರವೀಣ್ ಸ್ಕ್ಯಾನಿಂಗ್ ಸೆಂಟರ್, ತುಮಕೂರು, ಕೊಡಗನೂರು ಶ್ರೀಮತಿ ಸಾವಿತ್ರಮ್ಮ ಮತ್ತು ಶ್ರೀ ಅಂಗಡಿ ನಂಜುಂಡಪ್ಪ ಸ್ಮರಣಾರ್ಥ ದತ್ತಿ ದಾನಿಗಳು ಶ್ರೀಮತಿ ಎ.ಬಿ. ನಾಗರತ್ನ ಮತ್ತು ಬಸವರಾಜಪ್ಪ, ದಾವಣಗೆರೆ ಹಾಗೂ ಕೊಡಗನೂರು ಎಸ್. ಚನ್ನವೀರಪ್ಪ ಮಾಸ್ಟರ್ ಶ್ರೀಮತಿ ಎಸ್. ವೀರಮ್ಮ ಸ್ಮರಣಾರ್ಥ ದತ್ತಿ ದಾನಿಗಳು ಎಸ್.ಸಿ. ಮಹಾರುದ್ರಪ್ಪ ಮತ್ತು ಶ್ರೀಮತಿ ಕೆ.ಬಿ. ಮಂಜುಳಾ ಇವರುಗಳಿಂದ ನಡೆಯುವುದು.