ದಾವಣಗೆರೆ, ಫೆ.12- ನಗರದ ಎಸ್. ನಿಜಲಿಂಗಪ್ಪ ಬಡಾವಣೆಯಲ್ಲಿರುವ ಶ್ರೀ ಗಣಪತಿ, ಶಾರದಾಂಬ, ಚಂದ್ರಮೌಳೇಶ್ವರ ಮತ್ತು ಶಂಕರಾಚಾರ್ಯರ ದೇವಸ್ಥಾನಗಳ 16ನೇ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ನಾಡಿದ್ದು ದಿನಾಂಕ 14 ಮತ್ತು 15ರಂದು ಶಂಕರ ಸಮುದಾಯ ಭವನದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.
ದಿನಾಂಕ 14ರ ಬೆಳಗ್ಗೆ 7.30ರಿಂದ ಮಂಗಳವಾದ್ಯ, ಕಲಶ ಸ್ಥಾಪನೆ, ಗಣಪತಿ ಮತ್ತು ಚಂದ್ರಮೌಳೇಶ್ವರರಿಗೆ ಅಭಿಷೇಕ, ಶಾರದಾಂಬ ಮೂರ್ತಿಗೆ ಸಹಸ್ರನಾಮ ಅರ್ಚನೆ, ಶ್ರೀಚಕ್ರ ಪೂಜೆ, ಸಪ್ತಶತಿ ಪಾರಾಯಣ, ಗಣ ಹೋಮ ಸೇರಿದಂತೆ ಪೂಜಾ ಕಾರ್ಯಗಳು ನೆರವೇರಲಿದ್ದು, ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ ಮಂಗಳಾರತಿ ನಡೆಯಲಿದೆ.
ದಿನಾಂಕ 14 ಮತ್ತು 15ರ ಸಂಜೆ 6ಕ್ಕೆ ಅದ್ವೈತ ಪ್ರತಿಷ್ಠಾನದ ಅಧ್ಯಕ್ಷ, ಅಧ್ಯಾತ್ಮಿಕ ಚಿಂತಕ ಡಾ. ಪಾವಗಡ ಪ್ರಕಾಶ್ ರಾವ್ ಅವರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಲಿದ್ದು, ಸಂಜೆ 7.30ಕ್ಕೆ ಶಾರದಾಂಬ ದೇವಿಗೆ ಪಾಲಕಿ ಉತ್ಸವ, ಅಷ್ಟಾವಧಾನ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಜರುಗಲಿದೆ.
ಫೆ.15ರ ಬೆಳಗ್ಗೆ 7ರಿಂದ ಕಲಾಹೋಮ, ಬೆಳಗ್ಗೆ 9ಕ್ಕೆ ಪೂರ್ಣಾಹುತಿ, 9:30ರಿಂದ ಗಣಪತಿ ಮೂಲ ವಿಗ್ರಹಕ್ಕೆ ಅಥರ್ವ ಶೀರ್ಷದಿಂದ ಅಭಿಷೇಕ, ರುದ್ರಾಭಿಷೇಕ, ಶ್ರೀಚಕ್ರ ಪೂಜೆ ನಡೆಯಲಿದ್ದು, ಮಧ್ಯಾಹ್ನ 12.30ರ ನಂತರ ಅನ್ನ ಸಂತರ್ಪಣೆ ಜರುಗಲಿದೆ.