ದಾವಣಗೆರೆ, ಫೆ. 10 – ಮಾಯಕೊಂಡ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಲೋಕೇಶ್ ನಾಯ್ಕ್ ಬಿ. ಆಯ್ಕೆಯಾಗಿದ್ದಾರೆ.
ಲೋಕೇಶ್, ದಾವಣಗೆರೆ ತಾಲ್ಲೂಕು ಹೆಚ್.ಕಲಪನಹಳ್ಳಿ ನಿವಾಸಿ. ಸ್ಪರ್ಧಿಸಿದ್ದ ಇತರೆ ಅಭ್ಯರ್ಥಿಗಳಿಗಿಂತ ಲೋಕೇಶ್ ನಾಯ್ಕ್ ಹೆಚ್ಚಿನ ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.