ದಾವಣಗೆರೆ, ಫೆ.10- ಡಿಲೈಟ್ ಡ್ಯಾನ್ಸ್ ಅಂಡ್ ಇವೆಂಟ್ಸ್ ವತಿಯಿಂದ ಹಿರೇಕೆರೂರಿನಲ್ಲಿ ಕಳೆದ ವಾರ ನಡೆದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಕೆ. ಶಾನ್ವಿಕಾ ನಾಯ್ಕ್ ಪ್ರಥಮ ಸ್ಥಾನ ಗಳಿಸಿದ್ದಾರೆ.
ಶಾನ್ವಿಕಾ ನಾಯ್ಕ್, ತೋಳಹುಣಸೆ ಗ್ರಾಮದ ಕುಮಾರ್ ನಾಯ್ಕ್ ಹಾಗೂ ತ್ರಿವೇಣಿ ದಂಪತಿಯ ಪುತ್ರಿ. ಕೆಡಿ ಡ್ಯಾನ್ಸ್ ಕಂಪನಿಯ ಕರ್ಣ ಮಾಸ್ಟರ್ ಬಳಿ ತರಬೇತಿ ಪಡೆಯುತ್ತಿದ್ದಾರೆ.