ಮಾಲಾಧಾರಿಗಳು ಸ್ಪಷ್ಟ-ನಿರ್ದಿಷ್ಟವಾಗಿ ನಡೆದುಕೊಳ್ಳಬೇಕು

ಮಾಲಾಧಾರಿಗಳು ಸ್ಪಷ್ಟ-ನಿರ್ದಿಷ್ಟವಾಗಿ ನಡೆದುಕೊಳ್ಳಬೇಕು

ಹರಪನಹಳ್ಳಿ ತಾಲ್ಲೂಕಿನಲ್ಲಿ ಸಂತ ಶ್ರೀ ಸೇವಾಲಾಲ್ ಮಹಾರಾಜರ 25 ನೇ ವರ್ಷದ  ಮಾಲಾ ಧಾರಿಗಳ ಪಾದಯಾತ್ರೆ ಆರಂಭ

ಹರಪನಹಳ್ಳಿ, ಫೆ. 10- ತಾಂಡಾದ ಯುವಕರು ದುಶ್ಚಟದಿಂದ ದೂರ ಇದ್ದಲ್ಲಿ, ನಿಮ್ಮ ಕುಟುಂಬದ ಜೀವನವನ್ನು ಆರ್ಥಿಕವಾಗಿ ಸದೃಢಗೊಳಿಸುವುದಕ್ಕೆ  ಸಾಧ್ಯವಾಗುತ್ತದೆ ಎಂದು ಮುಖಂಡ ಎಂ.ಪಿ. ನಾಯ್ಕ   ಹೇಳಿದರು.

ತಾಲ್ಲೂಕಿನ ಮಾಡಲಗೇರಿ ತಾಂಡಾದಲ್ಲಿ   ಸಂತ ಶ್ರೀ ಸೇವಾಲಾಲ್ ಮಹಾರಾಜರ 25 ನೇ ವರ್ಷದ  ಮಾಲಾ ಧಾರಿಗಳ ಪಾದಯಾತ್ರೆ ದಂಡಿಯ ವೃತ್ತದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾಲಾಧಾರಿಗಳು ಸ್ಪಷ್ಟ ಮತ್ತು ನಿರ್ದಿಷ್ಟವಾಗಿ ನಡೆದುಕೊಳ್ಳಬೇಕು. ಯಾವುದೇ ದುಶ್ಚಟಕ್ಕೆ ಬಲಿಯಾಗಿ, ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳ ಬಾರದು ಎಂದರು.

ಸಮುದಾಯದ ಹಿರಿಯರು ಯುವಕರ  ಬಗ್ಗೆ ಕಾಳಜಿ ವಹಿಸಿ. ನಿಮ್ಮ ಮಕ್ಕಳನ್ನು ವಿದ್ಯಾ ವಂತರನ್ನು  ಮತ್ತು  ಸೃಜನಶೀಲ ವ್ಯಕ್ತಿಯನ್ನಾಗಿ ಸಲು ಮಕ್ಕಳ ಹಿತದೃಷ್ಟಿಯಿಂದ ಆರ್ಥಿಕವಾಗಿ ಸದೃ ಢಗೊಳಿಸಲು  ತಂದೆ-ತಾಯಿಗಳು ಹೆಚ್ಚಿನ ಗಮನ ಹರಿಸಬೇಕು ಎಂದು  ಕಿವಿಮಾತು ಹೇಳಿದರು.

ಇದೇ ದಿನಾಂಕ 14 ರಂದು ನಡೆಯಲಿರುವ  ಸಂತ ಶ್ರೀ ಸೇವಾಲಾಲ್ ಮಹಾರಾಜ  286ನೇ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ಹೊನ್ನಾಳಿ ತಾಲ್ಲೂಕು ಸೂರನಗೊಂಡಕೊಪ್ಪದಲ್ಲಿ ಲಕ್ಷಾಂತರ ಭಕ್ತರು ಸೇರಲಿದ್ದಾರೆ. ಎಲ್ಲರೂ ಜಯಂತಿಗೆ ಬಂದು ಭಾಗವಹಿಸಿ ಕಾರ್ಯಕ್ರಮ ಗಳನ್ನು ಯಶಸ್ವಿಗೊಳಿಸಿ ಎಂದು ತಾಲ್ಲೂಕಿನ ಎಲ್ಲಾ ತಾಂಡಾದ ಭಕ್ತರಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ  ಡಾವೋ ಗೇಮ್ಯಾನಾಯ್ಕ, ಕಾರಬಾರಿ ಯಂಕ್ಯಾನಾಯ್ಕ, ಗ್ರಾ.ಪಂ.ಸದಸ್ಯ ಎಂ. ಹಾಲೇಶ್ ನಾಯ್ಕ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ನಾಗೇಂದ್ರ ನಾಯ್ಕ,   ಗ್ರಾ.ಪಂ. ಸದಸ್ಯ ಆರ್.ಮಲ್ಲೇಶ್ ನಾಯ್ಕ,  ಮುಖಂಡರಾದ ಎಂ. ಕೊಟ್ರೇಶ್ ನಾಯ್ಕ, ವಿ. ಮಲ್ಲೇಶ್ ನಾಯ್ಕ, ಪೂಜಾರಿ ಶೇಖರ್ ನಾಯ್ಕ, ವಿ. ರಾಮನಾಯ್ಕ, ಆರ್. ಚೆನ್ನವೀರನಾಯ್ಕ, ಲಂಕೇಶ್ ನಾಯ್ಕ, ಎಂ.ಎಸ್.ನಾಯ್ಕ,  ಡಿ. ರಮೇಶ್ ನಾಯ್ಕ, ವಿ.ಗಣೇಶ್ ನಾಯ್ಕ,  ಹೋಬ್ಯಾನಾಯ್ಕ, ಕೃಷ್ಣನಾಯ್ಕ, ಎಂ.ಪ್ರವೀಣ್ ಕುಮಾರ್, ವಿ.ಸಂತೋಷನಾಯ್ಕ, ಹೆಚ್. ಈರನಾಯ್ಕ, ಡಿ. ಮಲ್ಲೇಶ್ ನಾಯ್ಕ, ಎಸ್.ಜೇತಾನಾಯ್ಕ, ಎಂ. ದೇವೆಂದ್ರ ನಾಯ್ಕ  ಸೇರಿದಂತೆ ಇತರರು ಇದ್ದರು.

error: Content is protected !!