ಸರ್ವತೋಮುಖ ಬೆಳವಣಿಗೆಗೆ ಆಸಕ್ತಿ, ಏಕಾಗ್ರತೆ ಮುಖ್ಯ

ಸರ್ವತೋಮುಖ ಬೆಳವಣಿಗೆಗೆ ಆಸಕ್ತಿ, ಏಕಾಗ್ರತೆ ಮುಖ್ಯ

ಪೂರ್ವರಂಗ ನಮನ : ಭರತ ನಾಟ್ಯದ ನೃತ್ಯ ವೈಭವ

ದಾವಣಗೆರೆ, ಫೆ.10- ಮಕ್ಕಳು ಕಲೆ, ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿ ಮತ್ತು ಏಕಾಗ್ರತೆಯಿಂದ  ತೊಡಗಿಸಿಕೊಂಡರೆ, ಅವರು ಸರ್ವತೋಮುಖವಾಗಿ ಅಭಿವೃದ್ಧಿ ಹೊಂದುತ್ತಾರೆ ಎಂದು ನಮನ ಅಕಾಡೆಮಿಯ ಉಪಾಧ್ಯಕ್ಷರೂ ಆದ ದೂಡಾ ಅಧ್ಯಕ್ಷ ದಿನೇಶ್‌ ಕೆ. ಶೆಟ್ಟಿ ತಿಳಿಸಿದರು.

ನಮನ ಅಕಾಡೆಮಿ ವತಿಯಿಂದ ನಗರದ ಬಾಪುಜಿ ಸಭಾಂಗಣದಲ್ಲಿ ನಡೆದ `ಪೂರ್ವ ರಂಗ ನಮನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭರತನಾಟ್ಯ ಪ್ರದರ್ಶನ ನೀಡಲು ಸಜ್ಜುಗೊಂಡ ಈ ಮಕ್ಕಳಲ್ಲಿ ಶ್ರದ್ಧೆ, ಪರಿಶ್ರಮ ಹಾಗೂ ಆಸಕ್ತಿ ಎದ್ದು ಕಾಣುತ್ತಿದೆ. ಇಂತಹ ಮಕ್ಕಳು ಓದಿನಲ್ಲೂ ಮುಂದೆ ಬರುತ್ತಾರೆ. ಈ ಮಕ್ಕಳಿಗೆ ಅಂತರ್‌ ರಾಷ್ಟ್ರೀಯ ಮಟ್ಟದ ಕಲಿಕೆ ನೀಡುತ್ತಿರುವ ಡಿ.ಕೆ ಮಾಧವಿ ಅವರ ಕಾರ್ಯ ಶ್ಲ್ಯಾಘನೀಯ ಎಂದರು.

ನಮಶ್ರೀ ಧರಣಿ ಟಿ. ಕಶ್ಯಪ್‌ ಮಾತನಾಡಿ, ಮಕ್ಕಳು ಪ್ರಸ್ತುತ ಪಡಿಸಿದ ನೃತ್ಯಗಳಲ್ಲಿ ಅವರ ಗುರುಗಳಾದ ಡಿ.ಕೆ ಮಾಧವಿ ಅವರ ಬದ್ಧತೆ, ಶ್ರಮ ಎಲ್ಲವೂ ಕಾಣುತ್ತಿದೆ. ಅವರ ನೃತ್ಯದ ನಿತ್ಯ ಸೇವೆ ಹೀಗೆ ಮುಂದುವರೆಯಲಿ ಎಂದು ಆಶಿಸಿದರು.

ನೃತ್ಯ ನಾಟಕದ ದೃಶ್ಯ ವರ್ಧಕ ಅಂಶಗಳು, ಗಾಯನ-ಸಂಗೀತ ಸಂಯೋಜನೆ ಹಾಗೂ ನೃತ್ಯದ ಅಚಲ ಶೈಲಿಯು ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ನಗರಸಭಾ ಮಾಜಿ ಅಧ್ಯಕ್ಷ ಆರ್.ಹೆಚ್ ನಾಗಭೂಷಣ್, ನಮನ ಅಕಾಡೆಮಿ ಅಧ್ಯಕ್ಷ ಗೋಪಾಲಕೃಷ್ಣ, ನಿರ್ದೇಶಕ ಪಿ.ಸಿ. ರಾಮನಾಥ್, ಅನಿಲ್ ಬಾರಂಗಳ್, ಕಿರಣ್ ರವಿ ನಾರಾಯಣ್, ಸಿ.ಆರ್‌. ರಜತ್, ಗಾಯತ್ರಿ, ಮಾನಸ, ರಾಮನಾಥ್ ಮತ್ತಿತರರಿದ್ದರು.

error: Content is protected !!