ಭರಮಸಾಗರದಲ್ಲಿ ಜರುಗುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಅಂಗವಾಗಿ ಇಂದು ಬೆಳಿಗ್ಗೆ 10 ಗಂಟೆಗೆ ಪ್ರಧಾನ ವೇದಿಕೆಯಲ್ಲಿ ಪ್ರತಿಭಾನ್ವೇಷ ಣೆಯನ್ನು ಏರ್ಪಡಿಸಲಾಗಿದೆ. ತರಳ ಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಪಿಟೀಲು ವಾದನವನ್ನು ನುಡಿಸುವುದರ ಮೂಲಕ ಸ್ಪರ್ಧೆಗೆ ಚಾಲನೆ ನೀಡಲಿದ್ದಾರೆ. ಪ್ರಸಿದ್ಧ ಗಾಯಕ ಶಶಿಧರ ಕೋಟೆ, ಕೀಬೋರ್ಡನ್ನು ವಿದ್ವಾನ್ ಶಿವಾನಂದ ಜೋಯಿಸ್, ಮೆಂಡೋಲಿನ್ ವಾದನವನ್ನು ವಿದ್ವಾನ್ ಎಲ್ ಎಸ್ ಕಾರ್ತಿಕ್ ಮತ್ತು ಮೃದಂಗ ವಾದ್ಯವನ್ನು ವಿದ್ವಾನ್ ಶ್ರೀವತ್ಸ ನುಡಿಸಲಿದ್ದಾರೆ.
ತರಳಬಾಳು ಹುಣ್ಣಿಮೆ : ಇಂದು ಜಗದ್ಗುರುಗಳಿಂದ ಪಿಟೀಲು ವಾದನ
