ಬಿಜೆಪಿ ನಿಯಂತ್ರಿಸುವಲ್ಲಿ ಇಂಡಿಯಾ ಕೂಟ ವಿಫಲ : ಸಿದ್ದೇಶ್ವರ, ಗಾಯತ್ರಿ ಸಿದ್ದೇಶ್ವರ

ಬಿಜೆಪಿ ನಿಯಂತ್ರಿಸುವಲ್ಲಿ ಇಂಡಿಯಾ ಕೂಟ ವಿಫಲ : ಸಿದ್ದೇಶ್ವರ, ಗಾಯತ್ರಿ ಸಿದ್ದೇಶ್ವರ

ದಾವಣಗೆರೆ, ಫೆ. 8 – ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಂದಿದ್ದು, 27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ  ಗೆಲುವು ದಾಖಲಿಸಿರುವುದು ಸಂತೋಷವಾಗಿದೆ. ಈ ಗೆಲುವು ರಾಷ್ಟ್ರಕ್ಕೆ ಒಂದು ಸಂದೇಶವನ್ನು ನೀಡಿದಂತಾಗಿದೆ. ನರೇಂದ್ರ ಮೋದಿ ಅವರ ಜನಪ್ರಿಯತೆ, ಆಡಳಿತದ ಕಾರ್ಯವೈಖರಿ, ಜನಪರ ಬಜೆಟ್ ಮಂಡನೆ ಹಾಗೂ ಹಿಂದಿನ ಸರ್ಕಾರದ ಭ್ರಷ್ಟಾಚಾರಗಳು ಇವೆಲ್ಲವೂ ದೆಹಲಿಯ ಮತದಾರರ ಮನಸ್ಸು ಗೆಲ್ಲಲ್ಲು  ಸಹಕಾರಿಯಾಗಿವೆ ಎಂದು ಮಾಜಿ ಕೇಂದ್ರ ಸಚಿವ ಜಿ.ಎಂ. ಸಿದ್ದೇಶ್ವರ ಹಾಗೂ ಬಿಜೆಪಿ ಮುಖಂಡರಾದ ಶ್ರೀಮತಿ ಗಾಯತ್ರಿ ಸಿದ್ದೇಶ್ವರ ಅವರುಗಳು ತಿಳಿಸಿದ್ದಾರೆ.

ದೆಹಲಿಯಲ್ಲಿನ ಹಿಂದಿನ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷಗಳು ಉಚಿತ ಗ್ಯಾರಂಟಿಗಳನ್ನು ಘೋಷಿಸಿದ್ದರೂ ಸಹ ದೆಹಲಿಯ ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೇ ಬಿಜೆಪಿಗೆ ಅಧಿಕಾರವನ್ನು ನೀಡಿರುವುದು ಸ್ವಾಗತಾರ್ಹ ಎಂದು ಅವರು ಹೇಳಿದ್ದಾರೆ.

error: Content is protected !!