ದಾವಣಗೆರೆ, ಫೆ. 9 – ನಗರದ ಭಾವಸಾರ ಕ್ಷತ್ರೀಯ ವಿದ್ಯಾವರ್ಧಕ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಹಾಲಿ ಅಧ್ಯಕ್ಷರೂ ಆಗಿರುವ ಹಿರಿಯ ಕೈಗಾರಿಕೋದ್ಯಮಿ ಜಯಪ್ರಕಾಶ್ ಅಂಬರ್‌ಕರ್ ಅವರು ಸಂಘದ ಅಧ್ಯಕ್ಷರಾಗಿ ಮತ್ತೊಂದು ಅವಧಿಗೆ ಪುನರಾಯ್ಕೆಯಾಗಿದ್ದಾರೆ.
ಎ.ವಿ. ರಮೇಶ್ ಉಪಾಧ್ಯಕ್ಷರಾಗಿ, ಪ್ರಶಾಂತ್ ಅಂಬರ್‌ಕರ್ ಪ್ರಧಾನ ಕಾರ್ಯದರ್ಶಿಯಾಗಿ, ಎ.ಎನ್. ಮದನ್ ಕುಮಾರ್ ಕೋಶಾಧ್ಯಕ್ಷರಾಗಿ ಹಾಗೂ ಅತೀತ್ ಅಂಬರ್‌ಕರ್ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಸತ್ಯನಾರಾಯಣರಾವ್ ಸಾಕ್ರೆ ಹಾಗೂ ಗುರುನಾಥ ಮಿರಜಕರ್ ಆಡಳಿತಾಧಿಕಾರಿಗಳಾಗಿದ್ದಾರೆ. ರಾಜಶೇಖರ್ ಬೋಂದಾಡೆ, ಡಾ. ಎಂ.ಆರ್. ಜಯಪ್ರಕಾಶ್, ರಘು ಮುಸಳೆ, ಶಿವಪ್ರಕಾಶ್ ಅಂಬರ್‌ಕರ್, ಮದನ ಯು. ಅಂಬರ್‌ಕರ್, ಸಾವನ್ ಅಂಬರ್‌ಕರ್, ಸುನೀಲ್ ಬೆಳಂಕರ್, ಸಂಜಯ ಪಟಕೆ ನಿರ್ದೇಶಕರಾಗಿದ್ದಾರೆ.