ಜರ್ಮನ್ ಪ್ರವಾಸದಲ್ಲಿ ಸಚಿವ ಎಸ್ಸೆಸ್ಸೆಂ ತಂತ್ರಜ್ಞಾನ ಉಪಯೋಗಗಳ ಅಧ್ಯಯನ

ಜರ್ಮನ್ ಪ್ರವಾಸದಲ್ಲಿ ಸಚಿವ ಎಸ್ಸೆಸ್ಸೆಂ  ತಂತ್ರಜ್ಞಾನ ಉಪಯೋಗಗಳ ಅಧ್ಯಯನ

ದಾವಣಗೆರೆ, ಫೆ. 5 – ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರು ಜರ್ಮನ್ ಪ್ರವಾಸದಲ್ಲಿದ್ದು, ಆ ದೇಶದಲ್ಲಿನ ಗಣಿ ಮತ್ತು ಭೂ ವಿಜ್ಞಾನ,  ತೋಟಗಾರಿಕಾ ವಿಷಯಗಳು, ತಂತ್ರಜ್ಞಾನ ಬೆಳವಣಿಗೆ ಹಾಗೂ ಅವುಗಳ ಉಪಯೋಗದ  ಮಾಹಿತಿಯನ್ನು ಸಚಿವರು ಪಡೆದರು. 

ತಮ್ಮ ಇಲಾಖೆಗೆ ಸಂಬಂಧ ಪಟ್ಟಂತೆ ಅತ್ಯಾಧುನಿಕ ಅಧ್ಯಯನ ನಡೆಸಿದರು. ಈ ವೇಳೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು  ಉಪಸ್ಥಿತರಿದ್ದರು.

error: Content is protected !!