ಮಲೇಬೆನ್ನೂರಿನಲ್ಲಿ ಸಂಭ್ರಮದ ಗಂಧದ ಮೆರವಣಿಗೆ

ಮಲೇಬೆನ್ನೂರಿನಲ್ಲಿ ಸಂಭ್ರಮದ ಗಂಧದ ಮೆರವಣಿಗೆ

ಮಲೇಬೆನ್ನೂರು, ಫೆ.5- ಇಲ್ಲಿನ ಹಿಂದೂ – ಮುಸ್ಲಿಂ ಬಾಂಧವರ ಭಾವೈಕ್ಯತೆಯ ಸಂಕೇತವಾದ ಸೂಫಿ ಸಂತ ಹಜರತ್ ಸೈಯದ್ ಹಬೀಬುಲ್ಲಾ ಷಾ ಖಾದ್ರಿ ಅವರ ಉರುಸ್ ಅಂಗವಾಗಿ ಗಂಧದ (ಸಂದಲ್) ಮೆರವಣಿಗೆ ಬುಧವಾರ ಸಂಜೆ ಪಟ್ಟಣದಲ್ಲಿ ಸಂಭ್ರಮದಿಂದ ಜರುಗಿತು.

ಮುಸ್ಲಿಂ ಧರ್ಮ ಗುರುಗಳು ಹಿಂದೂಗಳ ಮನೆಯಲ್ಲಿ ಶ್ರೀಗಂಧವನ್ನು  ಪೂಜಿಸಿ ತಂದ ನಂತರ ದರ್ಗಾದಿಂದ ಆರಂಭವಾದ ಗಂಧದ ಮೆರವಣಿಗೆ ಪಟ್ಟಣದ ರಾಜ ಬೀದಿಯಲ್ಲಿ ವಿವಿಧ ಮೇಳಗಳೊಂದಿಗೆ ಸಂಚರಿಸಿತು. 

ಈ ವೇಳೆ ಹಿಂದೂ – ಮುಸ್ಲಿಮರು ಗಂಧಕ್ಕೆ ಸಕ್ಕರೆ ನಿವೇದಿಸಿ, ಭಕ್ತಿ ಸಮರ್ಪಣೆ ಮಾಡಿದರು. 

ಗಂಧ ಮತ್ತು ಉರುಸ್ ಅಂಗವಾಗಿ ಬುಧವಾರ ಇಡೀ ದಿನ ದರ್ಗಾ ಆವರಣದಲ್ಲಿ ಇದೇ ಮೊದಲ ಬಾರಿಗೆ ಹಮ್ಮಿಕೊಂಡಿದ್ದ ಸಾಮೂಹಿಕ ಅನ್ನ ಸಂತರ್ಪಣೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. 

ಸುನ್ನಿ ಜಾಮೀಯಾ ಮಸೀದಿಯ ಅಧ್ಯಕ್ಷ ಎಂ.ಬಿ. ಮಹಮ್ಮದ್ ಹಶಿಮ್, ಉಪಾಧ್ಯಕ್ಷ ಸೈಯದ್ ಸಾಬೀರ್, ಕಾರ್ಯದರ್ಶಿ ದಾದಾವಲಿ, ಖಜಾಂಚಿ ಯೂಸೂಫ್ ಖಾನ್ ಸೇರಿದಂತೆ ಕಮಿಟಿಯ ಇತರೆ ಪದಾಧಿಕಾರಿಗಳು ಹಾಜರಿದ್ದು, ಈ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

ನಾಳೆ ಗುರುವಾರ ಇಡೀ ದಿನ ಭಕ್ತರು ದರ್ಗಾಕ್ಕೆ ಆಗಮಿಸಿ ಭಕ್ತಿ ಸಲ್ಲಿಸಲಿದ್ದು, ರಾತ್ರಿ 9 ಕ್ಕೆ ದರ್ಗಾ ಆವರಣದಲ್ಲಿ ಪ್ರಸಿದ್ಧ ಖವ್ವಾಲರಿಂದ ಖವ್ವಾಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಉರುಸ್ ಅಂಗವಾಗಿ ದರ್ಗಾ ಹಾಗೂ ದರ್ಗಾ ರಸ್ತೆ ವಿದ್ಯುತ್ ದೀಪಾಲಂಕಾರದಿಂದ ಝಗಮಗಿ ಸುತ್ತಿದ್ದು, ಭಕ್ತರನ್ನು ಆಕರ್ಷಿಸುತ್ತಿದೆ.

error: Content is protected !!