12 ಲಕ್ಷದವರೆಗೆ ತೆರಿಗೆ ವಿನಾಯಿತಿ ನೀಡುವುದರ ಮೂಲಕ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದ ಜನರಿಗೆ, ಪರಿಶಿಷ್ಟ ಜಾತಿ, ಪಂಗಡದ ಮಹಿಳಾ ಉದ್ಯಮಿಗಳಿಗೆ 2 ಕೋಟಿ ವರೆಗೆ ಸಾಲ ನೀಡುವುದರ ಮೂಲಕ ಪರಿಶಿಷ್ಟ ಜಾತಿ/ಪಂಗಡದ ಮಹಿಳೆಯರಿಗೆ ಕೇಂದ್ರದ ಬಜೆಟ್ ಸಹಕಾರಿ ಯಾಗಿದೆ. ಧನ ಧಾನ್ಯ ಯೋಜನೆ ವಿಸ್ತರಣೆ ಹಾಗೂ ಕಿಸಾನ್ ಕಾರ್ಡ್ ಮೂಲಕ 3 ರಿಂದ 5 ಲಕ್ಷದವರೆಗೆ ಸಹಾಯ ಹೆಚ್ಚಿಸಿ ರೈತರಿಗೆ ಅನುಕೂಲ ವಾಗಿದೆ. ಐಐಟಿಗಳಲ್ಲಿ 6500 ಸೀಟುಗಳನ್ನು ಹೆಚ್ಚಿಸುವುದರ ಮೂಲಕ ಹಾಗೂ ಸ್ಟಾರ್ಟ್‌ಪ್‌ಗಳಿಗೆ 10 ಕೋಟಿ ಅನುದಾನ ನೀಡುವುದರ ಮೂಲಕ ಯುವಕರಿಗೆ ಉತ್ತೇಜನ ನೀಡಿದಂತಾಗಿದೆ. ಹೀಗೆ ಎಲ್ಲ ವರ್ಗದ ಜನರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಬಜೆಟ್ ಮಂಡಿಸಿದ ಕೇಂದ್ರ ಸರ್ಕಾರಕ್ಕೆ ಭಾರತೀಯ ಜನತಾ ಪಾರ್ಟಿ ದಾವ ಣಗೆರೆ ಜಿಲ್ಲಾ ಘಟಕದ ಹೃತ್ಪೂರ್ವಕ ಅಭಿನಂದನೆಗಳು.
– ರಾಜಶೇಖರ ನಾಗಪ್ಪ,
ಬಿಜೆಪಿ ಜಿಲ್ಲಾಧ್ಯಕ್ಷರು, ದಾವಣಗೆರೆ.