ಆದಾಯ ತೆರಿಗೆ ಮಿತಿ ಏರಿಕೆ : ಸ್ವಾಗತಾರ್ಹ

ಆದಾಯ ತೆರಿಗೆ ಮಿತಿ ಏರಿಕೆ : ಸ್ವಾಗತಾರ್ಹ

10,000 ವೈದ್ಯಕೀಯ ಶಿಕ್ಷಣದಲ್ಲಿನ ಸೀಟುಗಳನ್ನು ಹೆಚ್ಚಿಸಿದ್ದರೂ ಇನ್ನೂ ಹೆಚ್ಚು ಸೀಟುಗಳನ್ನು ಹೆಚ್ಚಿಸಿದ್ದಲ್ಲಿ ಮುಂದೆ ವೈದ್ಯಕೀಯ ಸೇವೆಯು ಸ್ವಲ್ಪ ಅಗ್ಗದ ದರದಲ್ಲಿ ಎಲ್ಲರ ಕೈಗೆಟುಕುವಂತಾಗುತ್ತಿತ್ತು.

ಕೃಷಿ ಕ್ಷೇತ್ರದಲ್ಲಿ ಇನ್ನಷ್ಟು ಗಮನ ನೀಡಿ ಅನ್ನದಾತನ ಜೀವನ ಸುಧಾರಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕಿತ್ತು. ಆದಾಯ ತೆರಿಗೆ ಮಿತಿಯನ್ನು 12 ಲಕ್ಷಕ್ಕೆ ಏರಿಸಿರುವುದು ಸ್ವಾಗತಾರ್ಹ. ಇದರಿಂದ ಮಧ್ಯಮ ವರ್ಗದ ಜನರಿಗೆ ಬಹಳಷ್ಟು ನೆಮ್ಮದಿ ಸಿಗುತ್ತದೆ. ಬಾಡಿಗೆ ವರಮಾನದಲ್ಲಿ ಟಿ.ಡಿ.ಎಸ್. ಗಾಗಿ ಮಿತಿಯನ್ನು 2.4 ಲಕ್ಷದಿಂದ 6 ಲಕ್ಷಕ್ಕೆ ಏರಿಸಿರುವುದು ಉತ್ತಮ ನಡೆ ಹಾಗೂ  ಕರ್ನಾಟಕದ ನೀರಾವರಿ ಯೋಜನೆಗಳನ್ನು ಕಡೆಗಣಿಸಿದ್ದು ರಾಜ್ಯಕ್ಕೆ ಬೇಸರದ ಸಂಗತಿ.

ಕರ್ನಾಟಕಕ್ಕೆ ಯಾವುದೇ ವಿಶೇಷ ಯೋಜನೆಯ ಘೋಷಣೆ ಇಲ್ಲದಿರುವುದು ನೋವಿನ ವಿಷಯ.

– ಜಯಚಂದ್ ಜೈನ್, ದಾವಣಗೆರೆ.

error: Content is protected !!