ಮುಂದಿನ ಜೀವನಕ್ಕೆ ಕಲೆ ಮತ್ತು ವಾಣಿಜ್ಯ ವಿಷಯಗಳು ಅತ್ಯವಶ್ಯಕ

ಮುಂದಿನ ಜೀವನಕ್ಕೆ ಕಲೆ ಮತ್ತು ವಾಣಿಜ್ಯ ವಿಷಯಗಳು ಅತ್ಯವಶ್ಯಕ

ಶಿವಾನಂದ್ ಸುತಗಟ್ಟಿ

ದಾವಣಗೆರೆ, ಫೆ. 2- ಮುಂದಿನ ಜೀವನಕ್ಕೆ ಕಲೆ ಮತ್ತು ವಾಣಿಜ್ಯ ವಿಷಯಗಳು ಅತ್ಯವಶ್ಯಕವಾಗಿದೆ. ಮುಂದೆ ಯಾವುದಾದರೂ ಸ್ಪರ್ಧಾತ್ಮಕ ಪರೀಕ್ಷೆ ಗಳಾದ ಐಎಎಸ್, ಕೆಎಎಸ್ ಪರೀಕ್ಷೆ ಗಳನ್ನು ತೆಗೆದುಕೊಂಡು ಯಶಸ್ವಿಯಾಗಿರಿ ಎಂದು ಎನ್‌ಸಿಸಿ ಕಮಾಂಡಿಂಗ್ ಶಿವಾನಂದ್ ಸುತಗಟ್ಟಿ ತಿಳಿಸಿದರು.

ಅವರು ನಗರದ ಅಥಣಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಮಾತನಾಡಿದರು.

ಮತ್ತೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿನಾಯಕ ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ಎನ್.ಎ. ಮುರುಗೇಶ್ ಮಾತನಾಡಿ, ನಿಮ್ಮ ಜೀವನದಲ್ಲಿ ಪ್ರಾತಃಸ್ಮರಣೀಯರು ಎಂದರೆ ರೈತ, ಯೋಧ ಮತ್ತು ಗುರು. ಇವರು ನಮ್ಮ ಸಂಸ್ಕೃತಿ, ಸಂಸ್ಕಾರ, ನಂಬಿಕೆ. 

ಇವುಗಳಿಂದಲೇ ನಮ್ಮ ದೇಶ ಹೃದಯ ಶ್ರೀಮಂತಿಕೆಯನ್ನು ಹೊಂದಿದೆ. ಇದಕ್ಕೆ ಮಹಾಕುಂಭಮೇಳವೇ ಸಾಕ್ಷಿಯಾಗಿದೆ. ಕನ್ನಡ ಭಾಷಾಭಿಮಾನವನ್ನು ಉಳಿಸಿ, ಬೆಳೆಸಿ  ಸಂಸ್ಕಾರವಂತವಾಗಿ ಬೆಳೆಯಿರಿ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿನಾಯಕ ಎಜುಕೇಷನ್ ಟ್ರಸ್ಟ್ ಉಪಾಧ್ಯಕ್ಷ ಬಿ.ಸಿ. ಉಮಾಪತಿ ಮಾತನಾಡಿ, ಪಿಯುಸಿ ನಂತರ ಸಾಕಷ್ಟು ಅವಕಾಶಗಳಿವೆ. ಅವುಗಳನ್ನು ಬಳಸಿ, ನಿಮ್ಮ ಕಾಲೇಜು ಹಾಗೂ ತಂದೆ-ತಾಯಿಗಳಿಗೆ, ಉಪನ್ಯಾಸಕರಿಗೆ ಕೀರ್ತಿ ತನ್ನಿ. ಅದೇ ಸಂಸ್ಕೃತಿಯನ್ನು ಉಳಿಸಿಕೊಂಡು ಜೀವನದ ಸಾರ್ಥಕತೆ ಪಡೆಯಿರಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಅಧ್ಯಕ್ಷ ಅಥಣಿ ಪ್ರಶಾಂತ್, ಟ್ರಸ್ಟ್‌ನ ಪದಾಧಿಕಾರಿಗಳಾದ ಸುಗಂಧರಾಜ್ ಶೆಟ್ಟಿ, ಮೋಹನ್ ಉಪಸ್ಥಿತರಿದ್ದರು.

ದೀಕ್ಷಾ, ಸುಪ್ರಿಯಾ ಕಾರ್ಯಕ್ರಮ ನಿರೂಪಿಸಿದರು. 

ದಡಯಾನ ದಿವ್ಯ ವಾರ್ಷಿಕ ವರದಿ ವಾಚಿಸಿದರು. ಮಾನಸ ಸ್ವಾಗತಿಸಿದರು. ಶಂಕ್ರಮ್ಮ ವಂದಿಸಿದರು. 

error: Content is protected !!