ದಾವಣಗೆರೆ, ಜ. 31 – ಗ್ರಾಮದ ಸರ್ವಾಂಗೀಣ ಅಭಿವೃದ್ಧಿ, ದೇವಸ್ಥಾನಗಳ ನಿರ್ವಹಣೆ, ಪ್ರತಿಭಾವಂತ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಹಸ್ತ ನೀಡುವುದು ಸೇರಿದಂತೆ, ವಿವಿಧ ಸಾಮಾಜಿಕ ಉದ್ದೇಶದಿಂದ ತಾಲ್ಲೂಕಿನ ನಾಗನೂರು ಗ್ರಾಮದಲ್ಲಿ ಶ್ರೀ ಉಮಾ ಮಹೇಶ್ವರ ಸೇವಾ ಟ್ರಸ್ಟ್ ಸ್ಥಾಪಿಸಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಟ್ರಸ್ಟ್‌ನ ಗೌರವಾಧ್ಯಕ್ಷರಾಗಿ ಗ್ರಾಮದ ಹಿರಿಯರಾದ ಎಂ.ಜಿ. ಮಹೇಶ್ವರಪ್ಪ, ಹೆಚ್. ಬಸವರಾಜಪ್ಪ, ಆವರಗೆರೆ ಹನುಮಂತಪ್ಪ, ಎನ್.ಎಂ. ಮಹೇಶ್ವರಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.
ಅಧ್ಯಕ್ಷರಾಗಿ ಎನ್.ಡಿ. ಮಲ್ಲಿಕಾರ್ಜುನ, ಉಪಾಧ್ಯಕ್ಷರುಗಳಾಗಿ ಎ. ಅಂಜಿನಪ್ಪ, ಚನ್ನಾಚಾರಿ, ಟಿ.ಎನ್. ರಾಮಚಂದ್ರಪ್ಪ, ಹೆಚ್. ನಿಂಗಪ್ಪ ನೇಮಕಗೊಂಡಿದ್ದಾರೆ.
ಕಾರ್ಯದರ್ಶಿಗಳಾಗಿ ಎನ್.ಕೆ. ಅರುಣ್ ಕುಮಾರ್, ಎನ್.ಜಿ.ಶಶಿಕುಮಾರ್, ಕನ್ವೀನರ್ ಆಗಿ ಕೆ. ಮಂಜು ನಾಥ್, ಖಜಾಂಚಿಯಾಗಿ ಡಿ.ಎಸ್.ಜ್ಞಾನಮೂರ್ತಿ, ಡಿ. ನಾಗರಾಜ್ ಮತ್ತು ಸಹ ಟ್ರಸ್ಟಿಗಳಾಗಿ ಎನ್.ಡಿ.ನಾಗರಾಜಪ್ಪ, ಎಂ.ಎನ್. ಮಲ್ಲಿಕಾರ್ಜುನ, ಎನ್.ಎನ್. ಕಲ್ಲೇಶ್, ಎ. ರಾಜು,ಕೆ.ಶಿವಕುಮಾರ್, ಕಲ್ಲೇಶ್ ಪತ್ರೆ, ರೇವಣಸಿದ್ದಪ್ಪ ಬಣಕಾರ್, ಬಸವರಾಜ್ ಹೊಳೆಯಪ್ಪರ, ಎಸ್.ಎಚ್. ವಿಶ್ವನಾಥ್, ಕರಿಹಾಲಪ್ಪ ಮತ್ತು ಜರೀಕಟ್ಟೆ ಚಂದ್ರಪ್ಪ ಅವರನ್ನು ನೇಮಕ ಮಾಡಲಾಗಿದೆ.