ನಗರದಲ್ಲಿ ನಾಡಿದ್ದು ಶ್ರೀ ಅನ್ನಪೂರ್ಣೇಶ್ವರಿ ರಥೋತ್ಸವ

ನಗರದಲ್ಲಿ ನಾಡಿದ್ದು ಶ್ರೀ ಅನ್ನಪೂರ್ಣೇಶ್ವರಿ ರಥೋತ್ಸವ

ನಾಳೆ ಶ್ರೀ ಸೀತಾರಾಂ ಕಲ್ಯಾಣೋತ್ಸವ 

ಶ್ರೀ ಡಿ. ದೇವರಾಜ ಅರಸು ಬಡಾವಣೆ ಎ ಬ್ಲಾಕ್‌ನಲ್ಲಿ ರುವ ಶ್ರೀ ಮಾತಾ ಅನ್ನಪೂರ್ಣೇಶ್ವರಿ ದೇವಸ್ಥಾನ ದಲ್ಲಿ ಶ್ರೀ ದೇವಿಯ ರಥೋತ್ಸವ ಕಾರ್ಯಕ್ರಮ ಗಳು ಇಂದಿನಿಂದ ನಾಲ್ಕು ದಿನ ನಡೆಯ ಲಿವೆ ಎಂದು ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ಆರ್.ಜಿ.ನಾಗೇಂದ್ರ ಪ್ರಕಾಶ್ ತಿಳಿಸಿದ್ದಾರೆ.

ಇಂದು ಬೆಳಿಗ್ಗೆ 6 ಕ್ಕೆ ಶ್ರೀ ದೇವಿಗೆ ಪುಷ್ಪಾರ್ಚನೆ, ಕುಂಕುಮಾರ್ಪಣೆ, ಪಾರಾಯಣ, ನವಗ್ರಹ ಶಾಂತಿ ಹೋಮ, ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 5 ಗಂಟೆಗೆ ತುಳಸಿ ಅರ್ಚನೆ, ಭಜನೆ, ಸಾಂಸ್ಕೃತಿಕ ಕಾರ್ಯ ಕ್ರಮ, ಸಂಜೆ 7ಕ್ಕೆ ತಪಸ್ಯ ವಾಸವಿ ನೃತ್ಯಾಲಯ ಮಕ್ಕಳಿಂದ ನೃತ್ಯ ಪ್ರದರ್ಶನ ಜರುಗಲಿದೆ.

ನಾಳೆ ಭಾನುವಾರ ಬೆಳಿಗ್ಗೆ 6 ಕ್ಕೆ ನವಚಂಡಿಕಾ ಯಾಗ, ಸಂಜೆ 6ಕ್ಕೆ ಶ್ರೀ ಸೀತಾರಾಮ ಕಲ್ಯಾಣೋತ್ಸವ ಏರ್ಪಾಡಾಗಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷರೂ ಆಗಿರುವ ಹಿರಿಯ ನ್ಯಾಯವಾದಿ ಪ್ರಕಾಶ್ ಪಾಟೀಲ್ ಹೇಳಿದರು.

ದಿನಾಂಕ 3ರ ಸೋಮವಾರ ಬೆಳಿಗ್ಗೆ ಸುದರ್ಶನ ಹೋಮ, ರುದ್ರ ಹೋಮ, ಸಂಜೆ 6.30ಕ್ಕೆ ಶ್ರೀ ವಾಸವಿ ಗಾನಾಮೃತ ತಂಡದಿಂದ ನೃತ್ಯ ಮತ್ತ ಸಂಗೀತ ಸೇವೆ ನಡೆಯಲಿದೆ.

ಫೆಬ್ರವರಿ 4ರ ಮಂಗಳವಾರ 8ಕ್ಕೆ ಅಭಿಷೇಕ, ಮಧ್ಯಾಹ್ನ 12.05ಕ್ಕೆ ಶ್ರೀ ಮಾತಾ ಅನ್ನಪೂರ್ಣೇಶ್ವರಿ ರಥೋತ್ಸವ, ಸಂಜೆ 5ಕ್ಕೆ ಶ್ರೀ ವಾಸವಿ ಯುವತಿಯರ ಭಜನಾ ಮಂಡಳಿ ಯಿಂದ ಭಜನೆ ಜರುಗಲಿದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಮಲ್ಲಿಕಾರ್ಜುನ್, ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್, ಪಾಲಿಕೆ ಮಹಾಪೌರರಾದ ಕೆ. ಚಮನ್ ಸಾಬ್, ಪಾಲಿಕೆ 15ನೇ ವಾರ್ಡಿನ ಸದಸ್ಯರಾದ ಶ್ರೀಮತಿ ಆಶಾ ಉಮೇಶ್ ಅವರುಗಳು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು.

error: Content is protected !!