ಹರಿಹರ, ಜ.31- ನಗರದ ಹೊರವಲಯದ ಗುತ್ತೂರು ಗ್ರಾಮದ ಲಲಿತಮ್ಮ ಬಡಾವಣೆಯ ಪ್ರಕಾಶ್ ಎಂಬುವವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ರೆಗುಲೇಟರ್ ಪೈಪು ಸೋರಿಕೆಯಿಂದ ಬೆಂಕಿ ಅನಾಹತ ಸಂಭವಿಸಿದ ಘಟನೆ ನಡೆದಿದೆ. ಸಿಲಿಂಡರ್ ಬೆಂಕಿ ಅನಾಹುತ ದಿಂದಾಗಿ ಮನೆಯ ಒಳಗಡೆ ಬಾಗಿಲು ಕಿಟಕಿಗಳಿಗೆ, ಸಿಲಿಂಗ್ ಪ್ಯಾನ್, ಕೂಲರ್ ಫ್ರೀಜ್, ಸೋಲಾರ್ ಸೇರಿದಂತೆ ಗೃಹೋಪಯೋಗಿ ವಸ್ತುಗಳು ಸುಟ್ಟಿರುತ್ತವೆ. ಆದರೆ, ಯಾರಿಗೂ ಯಾವುದೇ ರೀತಿಯ ಗಾಯಗಳು ಆಗದೇ ಇರುವುದು ಕಂಡುಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳ ಆಗಮಿಸಿ, ಬೆಂಕಿಯನ್ನು ನಂದಿಸುವ ಮೂಲಕ ಹೆಚ್ಚಿನ ಪ್ರಮಾಣದ ಅನಾಹುತ ಆಗದಂತೆ ತಡೆದಿದ್ದಾರೆ.
February 1, 2025