ದಾವಣಗೆರೆ,ಜ.29- ನಗರದ ಶ್ರೀ ಡಿ. ದೇವರಾಜ ಅರಸು ಬಡಾವಣೆ ಎ ಬ್ಲಾಕ್ನಲ್ಲಿ ರುವ ಶ್ರೀ ಮಾತಾ ಅನ್ನಪೂರ್ಣೇಶ್ವರಿ ದೇವಸ್ಥಾನ ದಲ್ಲಿ ನಾಡಿದ್ದು ದಿನಾಂಕ 31ರಿಂದ ಫೆಬ್ರವರಿ 4ರವರೆಗೆ ಐದು ದಿನಗಳ ಕಾಲ ಶ್ರೀ ದೇವಿಯ ರಥೋತ್ಸವ ಕಾರ್ಯಕ್ರಮಗಳು ವಿಜೃಂಭಣೆ ಯಿಂದ ನಡೆಯಲಿವೆ ಎಂದು ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ಆರ್.ಜಿ.ನಾಗೇಂದ್ರ ಪ್ರಕಾಶ್ ತಿಳಿಸಿದ್ದಾರೆ.
ಇಲ್ಲಿನ ವರದಿಗಾರರ ಕೂಟದ ಕಚೇರಿ ಯಲ್ಲಿ ಇಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನಾಂಕ 31ರ ಶುಕ್ರ ವಾರ ಬೆಳಿಗ್ಗೆ 7.30ಕ್ಕೆ ಅಭಿಷೇಕ, ದೀಪಾ ರಾಧನೆ, ಗಣಪತಿ ಹೋಮ, ಸಂಜೆ ಶ್ರೀಮತಿ ಶೀಲಾ ನಟರಾಜ್ ಮತ್ತು ಸಂಗಡಿಗ ರಿಂದ ಭಜನೆ ಜರುಗಲಿದೆ ಎಂದರು.
ನಂತರ ಸಂಜೆ 7 ಕ್ಕೆ ಧಾರ್ಮಿಕ ಮತ್ತು ಅಧ್ಯಾತ್ಮಿಕ ವಿಚಾರಗಳ ಕುರಿತಂತೆ ಹಿರಿಯ ಪತ್ರಕರ್ತ ಹೆಚ್.ಬಿ.ಮಂಜುನಾಥ್ ಮತ್ತು ಅಂಕಣ ಕಾರ ಜಗನ್ನಾಥ್ ನಾಡಿಗೇರ್ ಅವ ರಿಂದ ಉಪನ್ಯಾಸ ಏರ್ಪಾಡಾಗಿದೆ.
ಫೆಬ್ರವರಿ 1ರ ಶನಿವಾರ ಬೆಳಿಗ್ಗೆ 6 ಕ್ಕೆ ಶ್ರೀ ದೇವಿಗೆ ಪುಷ್ಪಾರ್ಚನೆ, ಕುಂಕುಮಾರ್ಪಣೆ, ಪಾರಾಯಣ, ನವಗ್ರಹ ಶಾಂತಿ ಹೋಮ, ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 5 ಗಂಟೆಗೆ ತುಳಸಿ ಅರ್ಚನೆ, ಭಜನೆ, ಸಾಂಸ್ಕೃತಿಕ ಕಾರ್ಯ ಕ್ರಮ, ಸಂಜೆ 7ಕ್ಕೆ ತಪಸ್ಯ ವಾಸವಿ ನೃತ್ಯಾಲಯ ಮಕ್ಕಳಿಂದ ನೃತ್ಯ ಪ್ರದರ್ಶನ ಜರುಗಲಿದೆ.
ಫೆಬ್ರವರಿ 2ರ ಭಾನುವಾರ ಬೆಳಿಗ್ಗೆ 6 ಕ್ಕೆ ನವಚಂಡಿಕಾ ಯಾಗ, ಸಂಜೆ 6ಕ್ಕೆ ಶ್ರೀ ಸೀತಾರಾಮ ಕಲ್ಯಾಣೋತ್ಸವ ಏರ್ಪಾಡಾಗಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷರೂ ಆಗಿರುವ ಹಿರಿಯ ನ್ಯಾಯವಾದಿ ಪ್ರಕಾಶ್ ಪಾಟೀಲ್ ಹೇಳಿದರು.
ಫೆಬ್ರವರಿ 3ರ ಸೋಮವಾರ ಬೆಳಿಗ್ಗೆ ಸುದರ್ಶನ ಹೋಮ, ರುದ್ರ ಹೋಮ, ಸಂಜೆ 6.30ಕ್ಕೆ ಶ್ರೀ ವಾಸವಿ ಗಾನಾಮೃತ ತಂಡದಿಂದ ನೃತ್ಯ ಮತ್ತ ಸಂಗೀತ ಸೇವೆ ನಡೆಯಲಿದೆ.
ಫೆಬ್ರವರಿ 4ರ ಮಂಗಳವಾರ 8ಕ್ಕೆ ಅಭಿಷೇಕ, ಮಧ್ಯಾಹ್ನ 12.05ಕ್ಕೆ ಶ್ರೀ ಮಾತಾ ಅನ್ನಪೂರ್ಣೇಶ್ವರಿ ರಥೋತ್ಸವ, ಸಂಜೆ 5ಕ್ಕೆ ಶ್ರೀ ವಾಸವಿ ಯುವತಿಯರ ಭಜನಾ ಮಂಡಳಿ ಯಿಂದ ಭಜನೆ ಜರುಗಲಿದೆ.
ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಮಲ್ಲಿಕಾರ್ಜುನ್, ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್, ಪಾಲಿಕೆ ಮಹಾಪೌರರಾದ ಕೆ. ಚಮನ್ ಸಾಬ್, ಪಾಲಿಕೆ 15ನೇ ವಾರ್ಡಿನ ಸದಸ್ಯರಾದ ಶ್ರೀಮತಿ ಆಶಾ ಉಮೇಶ್ ಅವರುಗಳು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು.
ದೇವಸ್ಥಾನ ಸಮಿತಿ ಉಪಾಧ್ಯಕ್ಷ ತಾತಾ ವೆಂಕಟಚಲಪತಿ ಶೆಟ್ರು, ಕಾರ್ಯದರ್ಶಿ ವಿ. ವೀರಭದ್ರರಾವ್, ಖಜಾಂಚಿಗಳಾದ ನಾಗಭೂಷಣ್ ಕಡೇಕೊಪ್ಪ, ತಾತಾ ಕೆ. ಜಯಂತ್ ಮತ್ತು ದೇವಸ್ಥಾನದ ಶ್ರೀನಿವಾಸ್, ಸಚಿನ್ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.