ದಾವಣಗೆರೆ, ಜ. 29- ರಂಗ ಸಂಘಟಕ ಹಾಗೂ ಜಿಲ್ಲಾ ಹವ್ಯಾಸಿ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ಎನ್.ಎಸ್. ರಾಜು ಇವರು ಇತ್ತೀಚೆಗೆ ಬೆಂಗಳೂರಿನ ಕರ್ನಾಟಕ ನಾಟಕ ಅಕಾಡೆಮಿ ಕೇಂದ್ರ ಕಚೇರಿಯಲ್ಲಿ ಅಕಾಡೆಮಿ ಅಧ್ಯಕ್ಷ ಕೆ.ಯು. ನಾಗರಾಜ್ ಮೂರ್ತಿ ಅವರನ್ನು ಭೇಟಿಯಾಗಿ ಕಲಾವಿದರ ಕುಂದು-ಕೊರತೆ, ಮಾಸಾಶನ, ಪ್ರಾಯೋಜನೆ, ಅಕಾಡೆಮಿ ಪ್ರಶಸ್ತಿ ಇನ್ನೂ ಮುಂತಾದ ವಿಚಾರಗಳ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಲಾವಿದರ ಪರವಾಗಿ ನಾಟಕ ಅಕಾಡೆಮಿ ಅಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಾನಪದ ಕಲಾವಿದ ಸಾರಥಿಯ ಬಿ. ಹನುಮಂತಾಚಾರಿ ಹಾಗೂ ಅಕಾಡೆಮಿಯ ಸದಸ್ಯರುಗಳು ಉಪಸ್ಥಿತರಿದ್ದರು.