ದಾವಣಗೆರೆ ವಿಶ್ವವಿದ್ಯಾಲಯದ ಇಂಗ್ಲಿಷ್‌ ವಿಭಾಗದಲ್ಲಿ ಕ್ರೀಡಾ ಕಲರವ

ದಾವಣಗೆರೆ ವಿಶ್ವವಿದ್ಯಾಲಯದ ಇಂಗ್ಲಿಷ್‌ ವಿಭಾಗದಲ್ಲಿ ಕ್ರೀಡಾ ಕಲರವ

ದಾವಣಗೆರೆ, ಜ.28- ತೋಳಹುಣಸೆಯ ದಾವಣಗೆರೆ ವಿವಿ ಇಂಗ್ಲಿಷ್‌ ಅಧ್ಯಯನ ವಿಭಾಗದ ವತಿಯಿಂದ ಸೋಮವಾರ ನಡೆದ ಕ್ರೀಡಾಕೂಟಕ್ಕೆ ವಿಭಾಗದ ಅಧ್ಯಕ್ಷ ಡಾ.ಫಕ್ಕಿರೇಶ್ ಹಳ್ಳಳ್ಳಿ ಚಾಲನೆ ನೀಡಿದರು.

ಪ್ರಥಮ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಕ್ರಿಕೆಟ್, ಖೋ-ಖೋ, ವಾಲಿಬಾಲ್‌ ಹಾಗೂ ಕಬಡ್ಡಿ ಕ್ರೀಡೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಈ ವೇಳೆ ವಿಭಾಗದ ಡಾ.ಹೆಚ್‌.ಆರ್‌. ಮದಕರಿ ನಾಯಕ, ಡಾ.ರವಿಕುಮಾರ್‌ ಎಸ್‌. ಕುಂಬಾರ್‌, ಡಾ.ಯಜ್ಞಶ್ರೀ ಸಲ್ವಾ ಹಾಗೂ ವಿದ್ಯಾರ್ಥಿಗಳು ಇದ್ದರು.

error: Content is protected !!