ಮನಸೂರೆಗೊಳಿಸುವ ರೋಸಿಯ ಹೂಗಳು

ಮನಸೂರೆಗೊಳಿಸುವ ರೋಸಿಯ ಹೂಗಳು

ವರ್ಷದಲ್ಲಿ ಚಳಿಗಾಲ ಆರಂಭವಾಗುತ್ತಿದ್ದಂತೆ ರೋಸಿಯ ಹೂಗಳು ತಿಳಿ ಗುಲಾಬಿ ಬಣ್ಣದಿಂದ ಅರಳಿಕೊಂಡು ನಗರದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಇದರ ಪೂರ್ತಿ ಹೆಸರು ‘ಟಬೆಬುಯಾ ರೋಸಿಯ’ ಎಂಬುದು ಒಂದು ಹೆಸರಾದರೆ ‘ಗುಲಾಬಿ ಪೌಯಿ’ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಬೇರೆ ಬೇರೆ ರಾಜ್ಯಗಳಲ್ಲಿ ಇದಕ್ಕೆ ಬೇರೆ ಬೇರೆಯದ್ದೇ ಹೆಸರುಗಳು ಇವೆ. ಕನ್ನಡದಲ್ಲಿ ಗುಲಾಬಿ ಮರ, ತೆಲುಗಿನಲ್ಲಿ ಪಚಗವಿ ಚೆಟ್ಟು, ಮಲೆಯಾಳಂ ಮತ್ತು ತಮಿಳಿನಲ್ಲಿ ರೋಜ ಮರಂ, ಮರಾಠಿಯಲ್ಲಿ ಗುಲಾಬಿ ಬಹರ್, ಹಿಂದಿ ಮತ್ತು ಬೆಂಗಾಳಿ ಭಾಷೆಯಲ್ಲಿ ಬಸಂತ್ ರಾಣಿ ಹೀಗೇ ವಿಧ ವಿಧದ ಹೆಸರುಗಳಿಂದ ತನ್ನ ವೈಶಿಷ್ಟ್ಯವನ್ನು ಬೆಳೆಸಿಕೊಂಡಿದೆ.

ಈ ಗುಲಾಬಿ ಮರವು ಸುಮಾರು 98 ಅಡಿಗಳಷ್ಟು ಉದ್ದವಾಗಿ ಬೆಳೆಯಬಲ್ಲದು. ಇಡೀ ಭಾರತದಲ್ಲಿ ಯಾವುದೇ ಹವಾಮಾನಕ್ಕೂ ಬೆಳೆಯುವ, ತನ್ನ ಜೀವಾ ವಧಿಯನ್ನು 50 ವರ್ಷಗಳ ಕಾಲ ಉಳಿಸಿಕೊಳ್ಳುವ ಶಕ್ತಿಯು ಇದಕ್ಕಿದೆ. ಇದರ ತೊಗಟೆಯನ್ನು ಬಳಸಿ ಔಷಧಿಯನ್ನು ಸಿದ್ಧಪಡಿಸಲು ಸಾಧ್ಯವಿದೆ. ಮಲೇರಿಯಾ, ಕರುಳಿಗೆ ಸಂಬಂಧಿಸಿದ ಸಮಸ್ಯೆ, ಗರ್ಭಾಶಯದ ಕ್ಯಾನ್ಸರನ್ನು ನಿವಾರಣೆಗೊಳಿಸಲು ಸಹಕರಿಸುತ್ತದೆ. ಅಷ್ಟೇ ಅಲ್ಲದೇ ತೊಗಟೆಯ ಕಷಾಯವನ್ನು ಮಲ ಬದ್ದತೆ ಮತ್ತು ರಕ್ತ ಹೀನತೆಗೆ ಶಿಫಾರಸ್ಸು ಮಾಡಲಾಗುತ್ತದೆ ಎಂಬ ಸುದ್ದಿಯನ್ನು ಗೂಗಲ್ ಮಾಡಿ ನೋಡಿದಾಗ ಈ ಮರದ ಹೆಸರುಗಳ ಬಗ್ಗೆ ಒಂದು ಕಡೆಯಾದರೆ, ಮತ್ತೊಂದು ಬದಿಯಲ್ಲಿ ಇದರಲ್ಲಿರುವ ಔಷಧಿಯ ಗುಣಗಳನ್ನು ತಿಳಿದುಕೊಳ್ಳಬಹುದಾಗಿದೆ.

ಇಂತಹ ಮರಗಳನ್ನು ಯಥೇಚ್ಛವಾಗಿ ಕಾಣಲು ನಗರದಲ್ಲಿ ಆದಷ್ಟು ಮಟ್ಟಿಗೆ ಇದರ ಸಸಿಗಳನ್ನು ನೆಡುವ ಮೂಲಕ, ಸಾರ್ವಜನಿಕರು ನೀರೇರೆದು ಪೋಷಿಸುವ ಮೂಲಕ ಮುಂದಿನ ಪೀಳಿಗೆಗೆ ಒಂದಿಷ್ಟು ಹಸಿರುಮಯ ಪರಿಸರವನ್ನು ನಿರ್ಮಾಣಗೊಳಿಸುವಲ್ಲಿ ಮುಂದಾಗಬೇಕಾಗಿದೆ.

ವೈ. ವಾದಿರಾಜ ಭಟ್,  ವಕೀಲರು, ದಾವಣಗೆರೆ.

error: Content is protected !!